Public Voice
  • Home
  • ಮುಖ್ಯಾಂಶಗಳು
  • ಲಾಕ್ ಡೌನ್ ನಡುವೆ ಕನ್ನಡ ವರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ
ಜಿಲ್ಲೆ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಸಿನಿಮಾ

ಲಾಕ್ ಡೌನ್ ನಡುವೆ ಕನ್ನಡ ವರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ

ಶಿವಮೊಗ್ಗ,ಏ.24: ಕನ್ನಡದ ವರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಇಂದು ಕೆಲವು ಸಂಘ ಸಂಸ್ಥೆಗಳು ಲಾಕ್‍ಡೌನ್ ನಡುವೆಯೇ ಆಚರಿಸಿದರು.
ಸ್ನೇಹಮಯಿ ಸಂಘದವರು ಇಂದು ಬೆಳಿಗ್ಗೆ ಸಂಘದ ಕಚೇರಿಯಲ್ಲಿ 92ನೇ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಚನ್ನಪ್ಪ, ಡಾ.ರಾಜ್ ಎಂದೆಂದೂ ಮರೆಯದ ಮಾಣಿಕ್ಯವಾಗಿದ್ದಾರೆ. ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ಕಲಾ ಸೇವೆ ಮರೆಯಲಾಗದು. ಕನ್ನಡಕ್ಕಾಗಿ ಹೋರಾಡಿದ ಗೋಕಾಕ್ ಚಳುವಳಿಯನ್ನು ಕನ್ನಡಿಗರು ಎಂದೂ ಮರೆಯುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಪಡೆದ ಡಿ.ಜಿ.ಪರಶುರಾಮ್ ಇವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ರವಿಕುಮಾರ್, ಜಿ.ವಿಜಯ ಕುಮಾರ್, ಸುರೇಶ್ ಕುಮಾರ್, ಲಕ್ಷ್ಮೀಪಥಿ, ಆಂತೋಣಿ, ಅಭಿಷೇಕ್, ರೋಹನ್ ಮುಂತಾದವರು ಈ ಸಂದರ್ಭದಲ್ಲಿದ್ದರು.

ಜ್ವಾಲಾಮುಖಿ ಸಂಘದಿಂದ ಜನ್ಮ ದಿನಾಚರಣೆ: ವಿನೋಬನಗರದ ಆಟೋ ಸ್ಟ್ಯಾಂಡ್ ಬಳಿ ಜ್ವಾಲಾಮುಖಿ ರಾಜ್‍ಕುಮಾರ್ ಅಭಿಮಾನಿಗಳ ಸಂಘ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಡಾ.ರಾಜ್‍ಕುಮಾರ್ ಅವರ 92ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಮೂರ್ತಿ, ಬಾಬು,ಕೃಷ್ಣಪ್ಪ, ಗೋಪಿನಾಥ್, ಆನಂದ್ ಮುಂತಾದವರಿದ್ದರು.

Related posts

ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಒತ್ತಾಯ

Public Voice

ವಿಪ್ರ ಯುವ ಪರಿಷತ್ ವತಿಯಿಂದ ರಕ್ತದಾನ ಶಿಬಿರ

ಕೊರೋನಾ ನಿಯಂತ್ರಣ ಕ್ರಮ: ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನಾಕಿ ಚಾಟಿ ಬೀಸಿದ ಹೆಚ್.ಡಿಕೆ

Times fo Deenabandhu