Public Voice
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಸಿನಿಮಾ

ಹಿರಿಯ ನಟ, ನಿರ್ದೇಶಕ ಶಂಖನಾದ ಅರವಿಂದ್ ಇನ್ನಿಲ್ಲ…

ಬೆಂಗಳೂರು:  ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶಂಖನಾದ ಅರವಿಂದ್ (70) ಅವರ ನಿಧನಕ್ಕೆ  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ಸೂಚಿಸಿದ್ದಾರೆ.

ಕನ್ನಡದ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಪ್ರತಿಭಾನ್ವಿತ ಕಲಾವಿದ ಅರವಿಂದ್ ನಿಧನದಿಂದಾಗಿ ಕನ್ನಡ ಚಲನಚಿತ್ರ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಬೆಟ್ಟದ ಹೂವು ಸೇರಿದಂತೆ ಹಲವು ಚಿತ್ರಗಳಲ್ಲಿ ಮತ್ತು ಧಾರವಾಹಿಗಳಲ್ಲಿ ತಮ್ಮ ಶ್ರೇಷ್ಠ ಅಭಿನಯದ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಅಂತಹ ಮೇರು ಕಲಾವಿದ ಕೊರೋನಾಗೆ ಬಲಿಯಾಗಿರುವುದು ತುಂಬಾ ದುಃಖಕರ ವಿಷಯವಾಗಿದೆ. ಸಾಲುಗಟ್ಟಿನಿಂತ ಸರದಿಯಂತೆ  ಕೊರೋನಾದ ಕರೆಗೆ ಬಾಳ ಪಯಣದ ಹಾದಿ ಮುಗಿಸುತ್ತಿರುವವರಿಗೆ  ಸಂತಾಪಗಳನ್ನು ಹೇಳುವಾಗೆಲ್ಲ ಮನಸ್ಸು ಭಾರವಾಗುತ್ತದೆ ಎಂದು ಟಿ.ಎಸ್ ನಾಗಾಭರಣ ನೋವನ್ನು ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳ ಹಿಂದಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಅರವಿಂದ್ ಅವರ ಮಕ್ಕಳು, ಇದೀಗ ತಂದೆಯನ್ನು ಕಳೆದುಕೊಂಡಿದ್ದಾರೆ. ಅವರ ಕುಟುಂಬವರ್ಗಕ್ಕೆ ಅಭಿಮಾನಿಗಳಿಗೆ ಈ ಆಘಾತದ ಸುದ್ದಿಯನ್ನು ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಟಿ.ಎಸ್ ನಾಗಾಭರಣ ಸಂತಾಪ ಸೂಚಿಸಿದ್ದಾರೆ.

Related posts

ಉರುಳು ಸೇವೆ ಸೋಮುಗೆ ಭಾವಪೂರ್ಣ ಶ್ರದ್ಧಾಂಜಲಿ

Public Voice

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪರಿಸರ ಕಾರ್ಯಕ್ರಮ

Public Voice

ದಿನಕ್ಕೆ 150 ಕಿ.ಲೋ. ಲೀಟರ್ ಆಕ್ಸಿಜನ್ ಉತ್ಪಾದನೆಗೆ ವಿಐಎಸ್‍ಎಲ್ ಕಾರ್ಖಾನೆಗೆ ಅನುಮತಿ- ಸಚಿವ ಜಗದೀಶ್ ಶೆಟ್ಟರ್