Public Voice
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಸಿನಿಮಾ

ಧಾರವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್…

 

ಬೆಂಗಳೂರು: ಜನತಾ ಕರ್ಫ್ಯೂ ಜಾರಿಮಾಡಿದರೂ  ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ  ಮೇ 10ರಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಧಾರವಾಹಿ, ರಿಯಾಲಿಟಿ ಶೋಗಳ ಶೂಟಿಂಗ್ ಗೆ ಬ್ರೇಕ್ ಬಿದ್ದಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ. ಲಾಕ್ ಡೌನ್  ಹಿನ್ನೆಲೆಯಲ್ಲಿ  ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗುವುದು. ಬೆಂಗಳೂರು ಹೊರವಲಯ, ಪ್ರವಾಸಿ ತಾಣ, ರೆಸಾರ್ಟ್ ಯಾವುದೇ ಭಾಗದಲ್ಲಿ ಚಿತ್ರೀಕರಣಗಳು ನಡೆಸಿದರೂ ಅಂತವರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೇ ಬಿಗ್ ಬಾಸ್ ಶೂಟಿಂಗ್ ಕೂಡ ರದ್ದಾಗಲಿದೆ ಎಂದು ಸ್ಪಷ್ಟಪಡಿಸಿರುವ ಅವರು, ಚಿತ್ರೀಕರಣವಾಗಿರುವ ಎಪಿಸೋಡ್ ಗಳು ಮಾತ್ರ ಪ್ರಸಾರವಾಗಲಿವೆ. ಮೇ 24ರವರೆಗೆ ಹೊಸ ಎಪಿಸೋಡ್ ಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

Related posts

ಕರ್ಫ್ಯೂ ಮಾರ್ಗಸೂಚಿಗಳನ್ನು ಕನ್ನಡದಲ್ಲಿ ಹೊರಡಿಸಿ-ಸರ್ಕಾರಕ್ಕೆ  ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಮನವಿ

Times fo Deenabandhu

ಕೋವಿಡ್‌ನ ಎರಡೂ ಅಲೆಯಿಂದ ಕಲಿತ ಪಾಠ 3ನೇ ಅಲೆ ತಡೆಗೆ ನೆರವಾಗಲಿ: ನ್ಯಾ. ಬಿ.ಎಸ್.ಪಾಟೀಲ್

Public Voice

ಕೊರೋನಾ ನೆಪ ಹೇಳಿ‌ ಪರೀಕ್ಷೆ ರದ್ದು ಮಾಡುವ ಪ್ರಯತ್ನ ಬೇಡ…

Times fo Deenabandhu