Public Voice
  • Home
  • ಮುಖ್ಯಾಂಶಗಳು
  • ಮಾಜಿ ಹಾಕಿ ಆಟಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ರವೀಂದರ್ ಪಾಲ್ ಸಿಂಗ್ ಕೊರೊನಾಗೆ ಬಲಿ
ಕ್ರೀಡೆ ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಮಾಜಿ ಹಾಕಿ ಆಟಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ರವೀಂದರ್ ಪಾಲ್ ಸಿಂಗ್ ಕೊರೊನಾಗೆ ಬಲಿ

 

ನವದೆಹಲಿ: ಮಾಜಿ ಹಾಕಿ ಆಟಗಾರ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ರವೀಂದರ್ ಪಾಲ್ ಸಿಂಗ್ (65) ಅವರು ಮಹಾಮಾರಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ಕೊರೋನಾ ಸೋಂಕಿಗೊಳಗಾಗಿದ್ದ ರವೀಂದರ್ ಪಾಲ್ ಸಿಂಗ್  ಅವರು ಏಪ್ರಿಲ್ 24 ಹರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಎಂದು ರವೀಂದರ್ ಕುಟುಂಬದ ಮೂಲಗಳು ತಿಳಿಸಿವೆ.

ಆದರೆ ಶುಕ್ರವಾರ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು ಕೂಡಲೇ ಅವರಿಗೆ ವೆಂಟಿಲೇಟರ್ ಅಳವಡಿಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಆಡಿದ್ದ ರವೀಂದರ್ ಪಾಲ್ ಸಿಂಗ್ ಅವಿವಾಹಿತರಾಗಿದ್ದು, ಸೋದರ ಸೊಸೆ, ಪ್ರಜ್ಞಾ ಯಾದವರನ್ನು ಅಗಲಿದ್ದಾರೆ. ರವೀಂದರ್ ಪಾಲ್ ಸಿಂಗ್ ಅವರು 1979 ರ ಜೂನಿಯರ್ ವಿಶ್ವಕಪ್ನಲ್ಲಿ ಆಡಿದ್ದರು ಹಾಗೂ ಹಾಕಿಯಿಂದ ನಿವೃತ್ತಿಯಾದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರಿಯಿಂದಲೂ ಸ್ವಯಂಪ್ರೇರಿತರಾಗಿ ನಿವೃತ್ತರಾದರು. ಸೀತಾಪುರದಲ್ಲಿ ಜನಿಸಿದ ಸಿಂಗ್ 1979 ರಿಂದ 1984 ರವರೆಗೆ ಎರಡು ಒಲಿಂಪಿಕ್ಸ್ ನಲ್ಲಿ ಆಡಿದ್ದರು.

ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ (1980, 1983 ) ಹಾಂಕಾಂಗ್ನಲ್ಲಿ ನಡೆದ ಸಿಲ್ವರ್ ಜುಬಿಲಿ 10 ರಾಷ್ಟ್ರಗಳ ಕಪ್, 1982 ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಹಾಗೂ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಸೇರಿದಂತೆ ಇತರ ಪಂದ್ಯಾವಳಿಗಳಲ್ಲಿ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.

 

Related posts

ಹಿರಿಯ ನಾಯಕರ ಭೇಟಿ ಮಾಡಿದ ಎಂ. ಕೆ. ಸೋಮಶೇಖರ್

Public Voice

ಬಿ.ಎಂ.ಲಕ್ಷ್ಮಣ್‍ಕುಮಾರ್ ಅವರಿಗೆ ಡಾಕ್ಟರೇಟ್ ಗೌರವ

ಬಿಜೆಪಿಯೊಂದು ಸುಳ್ಳಿನ ಕಾರ್ಖಾನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಗೋವಿಂದ ಕಾರಜೋಳ