Public Voice
  • Home
  • ಮುಖ್ಯಾಂಶಗಳು
  • ಟೆಸ್ಟ್ ಕ್ರಮಾಂಕ ಪಟ್ಟಿ ರಿಲೀಸ್: ಅಗ್ರಸ್ಥಾನದಲ್ಲಿ ಟೀಂ ಇಂಡಿಯಾ ಮುಂದುವರಿಕೆ…
ಕ್ರೀಡೆ ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಟೆಸ್ಟ್ ಕ್ರಮಾಂಕ ಪಟ್ಟಿ ರಿಲೀಸ್: ಅಗ್ರಸ್ಥಾನದಲ್ಲಿ ಟೀಂ ಇಂಡಿಯಾ ಮುಂದುವರಿಕೆ…

 

ಮುಂಬೈ: ಐಸಿಸಿ ತಂಡಗಳ ರ್ಯಾಂ ಕಿಂಗ್ ನ ವಾರ್ಷಿಕ ಪರಿಷ್ಕರಣೆಯ ನಂತರ ಭಾರತ ಟೆಸ್ಟ್ನಲ್ಲಿ ಅಗ್ರಮಾನ್ಯ ತಂಡವಾಗಿ ಮುಂದುವರಿದಿದೆ.

ಟೆಸ್ಟ್ ರ್ಯಾಂಕಿಂಗ್ ಕ್ರಮಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು 24 ಪಂದ್ಯಗಳಿಂದ 2,014 ಪಾಯಿಂಟ್ ಕಲೆಹಾಕಿರುವ ವಿರಾಟ್ ಕೊಹ್ಲಿ ನೇತೃತ್ವದ  ಭಾರತ ತಂಡ 121ರ ರೇಟಿಂಗ್ನೊಡನೆ ಅಗ್ರಸ್ಥಾನದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ನಲ್ಲಿ ಭಾರತದ ಎದುರಾಳಿಯಾಗಿರುವ ನ್ಯೂಜಿಲೆಂಡ್ ತಂಡ 120 ರೇಟಿಂಗ್ ನೊಡನೆ ಎರಡನೇ ಸ್ಥಾನದಲ್ಲಿದೆ. ಕಿವೀಸ್ ತಂಡ 18 ಟೆಸ್ಟ್ಗಳಿಂದ 2,166 ಪಾಯಿಂಟ್ಸ್ ಸಂಗ್ರಹಿಸಿದೆ.

ಇಂಗ್ಲೆಂಡ್ (109 ರೇಟಿಂಗ್) ಮೂರನೇ ಸ್ಥಾನಕ್ಕೇರಿದ್ದು, ಅಲ್ಲಿ ನೆಲೆಯೂರಿದ್ದ ಆಸ್ಟ್ರೇಲಿಯಾ ತಂಡವನ್ನು (108) ನಾಲ್ಕನೇ ಸ್ಥಾನಕ್ಕೆ ಸರಿಸಿದೆ. ಪಾಕಿಸ್ತಾನ (94), ವೆಸ್ಟ್ ಇಂಡೀಸ್ (84), ದಕ್ಷಿಣ ಆಫ್ರಿಕಾ (80), ಶ್ರೀಲಂಕಾ (78), ಬಾಂಗ್ಲಾದೇಶ (46), ಜಿಂಬಾಬ್ವೆ (35) ಕ್ರಮವಾಗಿ ಐದರಿಂದ ಹತ್ತರವರೆಗಿನ ಸ್ಥಾನಗಳಲ್ಲಿವೆ. ವೆಸ್ಟ್ ಇಂಡೀಸ್ ಕಳೆದ ಬಾರಿ ಎಂಟನೇ ಸ್ಥಾನದಲ್ಲಿದ್ದು ಎರಡು ಮೆಟ್ಟಿಲು ಮೇಲೇರಿದೆ.

ಭಾರತ, ಜೂನ್ 18 ರಿಂದ 22ರವರೆಗೆ ಸೌತಾಂಪ್ಟನ್ನ ಏಜೀಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

 

Related posts

ಕೊರೋನ ನಿಯಂತ್ರಣ ಕಾರ್ಯದಲ್ಲಿ ವಾಣಿಜ್ಯೋದ್ಯಮಿಗಳು ಸಹಕರಿಸಲು ಜಿಲ್ಲಾಧಿಕಾರಿ ಮನವಿ

Times fo Deenabandhu

ನಾಳೆಯಿಂದ ಪ್ರತಿಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಕೋವಿಡ್ ಸಹಾಯವಾಣಿ…

Times fo Deenabandhu

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ: ಎರಡರಲ್ಲಿ ಬಿಜೆಪಿ ಒಂದು ಕಾಂಗ್ರೆಸ್ ಮುನ್ನಡೆ…

Times fo Deenabandhu