Public Voice
ಆರೋಗ್ಯ ಕ್ರೀಡೆ ಜಿಲ್ಲೆ ದೇಶ ನ್ಯೂಸ್ ಮೈಸೂರು ಶಿಕ್ಷಣ

30ಕ್ಕು ಹೆಚ್ಚು ಯೋಗ ಪ್ರಕಾರಗಳ ಅಭ್ಯಾಸಕ್ಕೆ ಅರ್ಜಿ ಆಹ್ವಾನ

ಮೈಸೂರು, ಜು- ಪರಮಹಂಸ ಯೋಗ ಮಹಾವಿದ್ಯಾಲಯ, ಎಸ್.ಪಿ.ಎಂ. ಟ್ರಸ್ಟ್(ರಿ) ನ ಆಶ್ರಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಂತಹ ಯೋಗದ ಮಹತ್ವ ಎಲ್ಲಾ ಜನರಿಗೂ ತಲುಪಿಸಬೇಕೆಂಬ ಉದ್ದೇಶದಿಂದ ಒಂದೇ ಸೂರಿನಡಿ 30 ಹೆಚ್ಚು ವಿವಿಧ ಯೋಗ ಪ್ರದರ್ಶನ ಪ್ರಕಾರಗಳ ಅಭ್ಯಾಸಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ ಎಂದು ಪರಮಹಂಸ ಯೋಗ ಮಹಾವಿದ್ಯಾಲಯ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪರಮಹಂಸ ಯೋಗ ಮಹಾವಿದ್ಯಾಲಯ ಅಧ್ಯಕ್ಷ ಶಿವಪ್ರಕಾಶ್ ಅವರು ಯೋಗ ಶಿಕ್ಷಕ ಕೋರ್ಸ್‍ಗಳಲ್ಲಿ ಯೋಗಾಸನ, ಯೋಗ ಥೆರಪಿ, ಪ್ರಾಣಾಯಾಮ, ಧ್ಯಾನ ಮುದ್ರೆ, ಯೋಗಶಾಸ್ತ್ರ, ಪತಂಜಲಿ ಯೋಗಸೂತ್ರ, ಶರೀರಶಾಸ್ತ್ರ ಫಿಸಿಯಾಲಜಿ, ಸೂರ್ಯ ನಮಸ್ಕಾರ, ಬೆಲ್ಟ್ ಯೋಗ, ರೋಪ್ ಯೋಗ, ಏರಿಯಲ್ ಯೋಗ, ರೇಖಿ ಚಿಕಿತ್ಸೆ, ಆಕ್ಯುಪಂಚರ್ ಚಿಕಿತ್ಸೆ, ಗೂಸಾ ಯೋಗ ಚಿಕಿತ್ಸೆ, ಪರ್ಯಾಯ ಚಿಕಿತ್ಸೆ ಆಹಾರ ಕ್ರಮ, ಮನೆ ಮದ್ದು ಜೀವನ ಕೌಶಲ್ಯ ಹಾಗೂ ಕಲಿಸುವಂತಹ ಕಲೆ ಹಾಗೂ ಇತ್ಯಾದಿ ವಿದ್ಯೆಗಳನ್ನು ತಿಳಿಸಿಕೊಡಲಾಗುತ್ತದೆ ಎಂದರು.

ಯೋಗ ತರಗತಿಗಳನ್ನು ದಿನಾಂಕ:-30-07-2021 ರಿಂದ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ತರಬೇತುದಾರರು, ಯೋಗ ತಜ್ಞರು ಹಾಗೂ ಪರಿಣಿತರಿಂದ ವೈದ್ಯರಿಂದ ತರಬೇತಿ ನೀಡಲಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9035506790 ಅಥವಾ 9008727172 ನ್ನು ಸಂಪರ್ಕಿಸಬಹುದು  ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಎಂ.ಎನ್. ವಿಕ್ರಮ, ಸುಮನ್ ಚಂದ್ರಪ್ರಿಯ, ರಂಗರಾಜು ಮುರಳಿಧರ್ ಉಪಸ್ಥಿತರಿದ್ದರು.

Related posts

ರಾಷ್ಟ್ರೀಯ ಬಿಕ್ಕಟ್ಟು ಈ ಸಮಯದಲ್ಲಿ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ- ಸುಪ್ರೀಂಕೋರ್ಟ್

Times fo Deenabandhu

ಬಿಸಿ ಊಟ ಬದಲಿಗೆ, ಆಹಾರಧಾನ್ಯ ವಿರತಣೆ ಇರಲಿ- ಸುನಂದ

Public Voice

ಜನತಾ ಕರ್ಫ್ಯೂ: ತೊಂದರೆಗೊಳಗಾದವರಿಗಾಗಿ ಜಿಲ್ಲಾ ಎನ್‍ಎಸ್‍ಯುಐ ಘಟಕದಿಂದ ಸಹಾಯವಾಣಿ ಆರಂಭ

Times fo Deenabandhu