Public Voice
ಇತರೆ ಜಿಲ್ಲೆಗಳು ದೇಶ ನ್ಯೂಸ್ ಮುಖ್ಯಾಂಶಗಳು ರಾಜ್ಯ

ತಟಸ್ಥವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಬೆಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 31 ದಿನಗಳಿಂದ ತಟಸ್ಥವಾಗಿದೆ.

ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.83 ಇದ್ದರೆ, ಡೀಸೆಲ್ ದರ 97.43 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಇನ್ನೂ 90 ರೂ ಗಡಿ ಮುಟ್ಟಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ಈ ವರ್ಷ ಗಣನೀಯ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ಈ ವರ್ಷ ಬರೋಬ್ಬರಿ 63 ಬಾರಿ ಬೆಲೆ ಏರಿಕೆ ಕಂಡಿದೆ. ಇದು ಜನವರಿ 1ರಿಂದ ಜುಲೈ 9ರವರೆಗೆ ಸರ್ಕಾರವೇ ನೀಡಿರುವ ಲೆಕ್ಕ. ಈ ಬೆಲೆ ಏರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 3.34 ಲಕ್ಷ ಕೋಟಿ ರೂ ಆದಾಯ ಹರಿದುಬಂದಿದೆ. ಇನ್ನು, ಇದೇ ಅವಧಿಯಲ್ಲಿ ಡೀಸೆಲ್ ಬೆಲೆ 61 ಬಾರಿ ಹೆಚ್ಚಳಗೊಂಡಿದೆ. ಇನ್ನು, ಬೆಲೆ ಇಳಿಕೆ ವಿಷಯಕ್ಕೆ ಬಂದರೆ ಈ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಕಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ.

ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾರುಕಟ್ಟೆ ನಿಯಂತ್ರಿತವಾಗಿವೆ ಎಂದು ಸರ್ಕಾರ ಹೇಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಾಗುವ ಬದಲಾವಣೆಯು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.  ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್​ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ. ಇದರಲ್ಲಿ ಅಬಕಾರಿ ಸುಂಕದ ಮೊತ್ತ 31.80 ರೂ ಇದೆ.

ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವ್ಯಾಟ್ ತೆರಿಗೆ ಇರುವುದರಿಂದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.

Related posts

ಸಿಎಂ ಮನೆ ಮುಂದೆ ಕೋವಿಡ್ ಸೋಂಕಿತನ ಪತ್ನಿಯ ಅಳಲು: ಸಿಎಂ ಬೆಡ್ ವ್ಯವಸ್ಥೆ ಮಾಡಿದ್ರೂ ಉಳಿಲಿಲ್ಲ ಜೀವ

ಕೊರೋನಾ ಹೆಚ್ಚಳ : ಅಧಿಕಾರಿಗಳ ಜತೆ ಸಿಎಂ ಬಿಎಸ್ ವೈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು..?

Times fo Deenabandhu

ಮೋಟಾರು ವಾಹನ ತೆರಿಗೆ ಪಾವತಿ ಅವಧಿ ವಿಸ್ತರಣೆ…

Times fo Deenabandhu