Public Voice
  • Home
  • ಜಿಲ್ಲೆ
  • ಶಾಲೆ ಪ್ರಾರಂಭಕ್ಕೆ ಮೈಸೂರು ಜಿಲ್ಲಾಡಳಿತ ಸಜ್ಜು
ಜಿಲ್ಲೆ ದೇಶ ನ್ಯೂಸ್ ಮುಖ್ಯಾಂಶಗಳು ಮೈಸೂರು ರಾಜ್ಯ ಶಿಕ್ಷಣ

ಶಾಲೆ ಪ್ರಾರಂಭಕ್ಕೆ ಮೈಸೂರು ಜಿಲ್ಲಾಡಳಿತ ಸಜ್ಜು

ಮೈಸೂರು: ಶಾಲೆ ಆರಂಭಿಸಲು ಅನುಮತಿ ಕೊಡಿ ಎಂದು ಸರಕಾರಕ್ಕೆ ಹೇಳಿದ್ದೇವೆ ಎಂದು ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, 9, 10 ನೇ ತರಗತಿ ಆರಂಭಿಸಲು ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ. ಶಾಲೆಗಳಿಗೆ ಸ್ಯಾನಿಟೈಸರ್ ಮಾಡಿಸಲು ಸೂಚಿಸಿದ್ದೇನೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳನ್ನು ತರಗತಿಯಲ್ಲಿ ಕೂರಿಸಲು ಹೇಳಲಾಗಿದೆ. ಜಿಲ್ಲೆಯ 130 ಪ್ರೌಢಶಾಲಾ ಶಿಕ್ಷಕರು ಮಾತ್ರ ಇನ್ನೂ ವಾಕ್ಸಿನ್ ಹಾಕಿಸಿ ಕೊಂಡಿಲ್ಲ. ಅವರಿಗೆ ನಾಳೆಯೆ ಲಸಿಕೆ ಹಾಕಿಸಲಾಗುವುದು. ಇನ್ನು ಗ್ರಾಮಾಂತರ ಶಾಲೆಗಳಲ್ಲಿ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ನಿಗಾ ಇಡಲು ಟೀಂಗಳನ್ನು ರಚನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಸುವುದು ಬೇಡ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಮುಂದುವರಿಸಲೇ ಬೇಕು ಎಂದಾದದರೆ ಮಧ್ಯಾಹ್ನ 2 ಗಂಟೆಯವರೆಗೂ ಎಲ್ಲಾ ವ್ಯಾಪಾರಕ್ಕೂ ಅವಕಾಶ ಕೊಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

Related posts

ರಾಜ್ಯಾದ್ಯಂತ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ಜಾರಿ….

Times fo Deenabandhu

ಆ. 8 ರಂದು ‘ಗೊರುಚ ಶರಣ ಪ್ರಶಸ್ತಿ’ ಮತ್ತು ‘ಗೊರುಚ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭ

Public Voice

ಟೀಕಿಸುವ ನೆಪದಲ್ಲಿ ತಿರುಗಿ ಬೈಯ್ಯುವುದು ಅದ್ಯಾವ ಶೋಭೆ-ಸಚಿವ ಕೆ.ಎಸ್. ಈಶ್ವರಪ್ಪಗೆ ವೈ.ಹೆಚ್. ನಾಗರಾಜ್ ಪ್ರಶ್ನೆ..

Times fo Deenabandhu