Public Voice
ಇತರೆ ಜಿಲ್ಲೆಗಳು ದೇಶ ನ್ಯೂಸ್ ಮುಖ್ಯಾಂಶಗಳು ರಾಜಕೀಯ ರಾಜ್ಯ

ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ವಿಜಯಪುರ: ಸಿಎಂ ಬಸವರಾಜ ಬೊಮ್ಮಾಯಿ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಮಾಡಿದರು.
ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಆಲಮಟ್ಟಿ ಜಲಾಶಯದಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ಬಳಿಕ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳ ಜೊತೆಗೆ ಸಿಎಂ ಬೊಮ್ಮಾಯಿ ಸಭೆ ನಡೆಸಿದರು.
ರೈತರು ಹಾಗೂ ರೈತ ಸಂಘಟನೆಗಳ ರೈತ ಮುಖಂಡರನ್ನು ಭೇಟಿಯಾಗಿ ರೈತರ ಸಮಸ್ಯೆ ಕುರಿತ ಹಾಗೂ ಇತರೆ ಬೇಡಿಕೆಗಳ ಮನವಿಗಳನ್ನು ಸ್ವೀಕರಿಸಿದರು.
ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಉಮೇಶ ಕತ್ತಿ, ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ, ದೊಡ್ಡನಗೌಡ ಪಾಟೀಲ್, ವೀರಣ್ಣ ಚರಂತಿಮಠ, ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಬಸನಗೌಡ ಯತ್ನಾಳ್ ಸೇರಿದಂತೆ ಎರಡು ಜಿಲ್ಲೆಗಳ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

Related posts

ಮೆಗ್ಗಾನ್  ಆಸ್ಪತ್ರೆಯ ಎದುರು ಬೆಡ್ ಇಲ್ಲ ಎನ್ನುವ ಬೋರ್ಡ್ ಹಾಕಲಾಗಿದೆ-ಎಂ.ಶ್ರೀಕಾಂತ್ ಅಸಮಾಧಾನ

ಕೋವಿಡ್ ಎರಡನೇ ಅಲೆ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರ ನೆರವಿಗೆ ಸರ್ಕಾರ ತಕ್ಷಣವೇ ಬರಬೇಕು-ಎಂ.ಕೆ. ಪ್ರಮೋದ್

10 ದಿನ ಲಾಕ್ ಡೌನ್ ವಿಸ್ತರಿಸಿದರೇ ಒಳ್ಳೆಯದು- ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯ