Public Voice
ಇತರೆ ಜಿಲ್ಲೆಗಳು ದೇಶ ನ್ಯೂಸ್ ಮುಖ್ಯಾಂಶಗಳು ರಾಜಕೀಯ

ತಾಲಿಬಾನಿಗಳ ದಬ್ಬಾಳಿಕೆ ಜಾಸ್ತಿ ದಿನ ನಡೆಯಲ್ಲ: ಮೋದಿ

ಭಯೋತ್ಪಾದನೆಯ ಆಧಾರದ ಮೇಲೆ ಸಾಮ್ರಾಜ್ಯವನ್ನು ನಿರ್ಮಿಸುವ ಚಿಂತನೆಯು ಅಲ್ಪ ಸಮಯದವರೆಗೆ ಮಾತ್ರ, ಮಾನವೀಯತೆಯನ್ನು ದೀರ್ಘಕಾಲ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ಅಫ್ಘಾನಿಸ್ತಾನದ ಮೇಲೆ ತಾಲಿಬಾನಿಗಳು ಕೆಲ ಸಮಯದವರೆಗೆ ಪ್ರಾಬಲ್ಯ ಮೆರೆಯಬಹುದು ಆದರೆ ಅವರ ದಬ್ಬಾಳಿಕೆ ಶಾಶ್ವತವಲ್ಲ ಅಮೆರಿಕಾ ಸೇನಾ ಬೆಂಬಲವನ್ನು ಹಿಂಪಡೆಯುತ್ತಲೇ ಅಘ್ಫಾನಿಸ್ತಾನದ ಮೇಲೆ ಮುರಿದು ಬಿದ್ದ ತಾಲಿಬಾನಿ ಉಗ್ರರು ಇಡೀ ದೇಶವನ್ನು ಈಗ ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಅಧ್ಯಕ್ಷ ಅಶ್ರಮ ಘನಿ ದೇಶದಿಂದ ಪಲಾಯನ ಮಾಡಿದ್ದು, ತಾಲಿಬಾನಿಗಳು ಆಡಳಿತದ ಚುಕ್ಕಣಿ ಹಿಡಿದಿದ್ದಾರೆ. ಅಘ್ಘನ್ನಲ್ಲಿ ತಾಲಿಬಾನಿಗಳು ಸೃಷ್ಟಿಸಿರುವ ಅರಾಜಕತೆಯನ್ನು ಇಡೀ ವಿಶ್ವವೇ ನೋಡುತ್ತಿದೆ ಎಂದಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಕಾಬೂಲ್ನಲ್ಲಿನ ಅವ್ಯವಸ್ಥೆಗಳನ್ನು ರೆಕಾರ್ಡ್ ಮಾಡಲು ಪ್ರಯತ್ನಿಸುವಾಗ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ವರದಿಗಳಾಗಿವೆ. ಆದರೆ ತಾಲಿಬಾನ್ ಮುಖಂಡ ಮಾತ್ರ ಮಹಿಳೆಯರು ಮತ್ತು ಪತ್ರಕರ್ತರು ನಮ್ಮ ಆಡಳಿತದಲ್ಲಿ ಭಯಪಡುವ ಅಗತ್ಯವಿಲ್ಲ ಎಂದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಫ್ಘನ್ನಲ್ಲಿ ಸಿಲುಕಿರುವ ಭಾರತೀಯ ಹಿಂದೂಗಳು, ಸಿಖ್ರ ಸುರಕ್ಷತೆ ಸಂಬಂಧ ಭಾರತದ ವಿದೇಶಾಂಗ ಕಾರ್ಯಾಲಯ ನಿರಂತರ ಸಂಪರ್ಕದಲ್ಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.

 

Related posts

ಜನ ಸ್ವಯಂ ನಿಯಂತ್ರಣ ಮಾಡಿಕೊಂಡರೇ ಸರ್ಕಾರದ ಕಠಿಣ ನಿಯಮಗಳು ಅಗತ್ಯವಿಲ್ಲ- ಸಚಿವ ಜಗದೀಶ್ ಶೆಟ್ಟರ್….

ಮಾರ್ಗಸೂಚಿಗಳ ಕಟ್ಟು ನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳುವಂತೆ ಸಲಹೆ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್

Times fo Deenabandhu

ರಾಜ್ಯದಲ್ಲಿ 5 ದಿನಗಳ ಕಾಲ ಮಳೆ ಆರ್ಭಟ: ಹವಾಮಾನ ಇಲಾಖೆ ಮುನ್ಸೂಚನೆ

Times fo Deenabandhu