Public Voice
ಆರೋಗ್ಯ ಜಿಲ್ಲೆ ದೇಶ ಧರ್ಮ ನಮ್ಮ ವಿಶೇಷ ನ್ಯೂಸ್ ಪ್ರಧಾನ ಸುದ್ದಿ ಮುಖ್ಯಾಂಶಗಳು ಮೈಸೂರು ರಾಜ್ಯ

ವಿಶಾಲ ತರಂಗ ಜಾಲ ಸೂರ್ಯಪಾನ

ನಮ್ಮ ಪ್ರಾಚೀನ ಗ್ರಂಥಗಳಲ್ಲಿ, ಪುರಾಣಗಳಲ್ಲಿ ಅಸಂಖ್ಯಾತ ಋಷಿ ಮುನಿಗಳು, ದೇವತೆಗಳು ಆಹಾರವಿಲ್ಲದೆ ಅನೇಕ ದಿವಸಗಳನ್ನು ವರ್ಷಗಳನ್ನು ಕಳೆದ ಉಲ್ಲೇಖ ಬರುತ್ತದೆ. ಈ ಋಷಿಮುನಿಗಳು, ದೇವತೆಗಳು ಬೇರೆ ಲೋಕದಲ್ಲಿ ಸಂಚರಿಸುವ ವ್ಯಕ್ತಿಗಳಾಗಿರಲಿಲ್ಲ.

ಅವರು ಈ ಭೂಮಿಯ ಮೇಲೇ ಇದ್ದವರು; ಇಲ್ಲೇ ಓಡಾಡಿದವರು ಇನ್ನು ನಮ್ಮ ಮನೆಗಳಲ್ಲಂತೂ ನಮ್ಮ ಅಜ್ಜ-ಅಜ್ಜಿಯರು ಕಥೆ ಹೇಳುವಾಗ ಏನೂ ಆಹಾರ ಸೇವಿಸದೆ ನಿರಾಯಸವಾದ ಜೀವನವನ್ನು ಸಾಗಿಸಿದ ಅನೇಕ ಮಹಾಮಹಿಮರ ವೃತ್ತಾಂತಗಳನ್ನು ಬಹಳ ಸಹಜವಾಗಿ ಹೇಳಿರುತ್ತಾರೆ. “ಪಾರ್ವತಿ ಶಿವನನ್ನು ಕುರಿತು ತಪಸ್ಸು ಮಾಡಲು ವರ್ಷಗಟ್ಟಲೆ ಕುಳಿತಾಗ ಅವಳು ಆಹಾರವನ್ನಿರಲಿ, ಒಂದು ಎಲೆಯನ್ನು ಸೇವಿಸಲಿಲ್ಲ. ಹಾಗಾಗಿ ಅವಳಿಗೆ ‘ಅಪರ್ಣಾ’ ಎಂಬ ಹೆಸರು ಅಂಟಿಕೊಂಡಿತು. ಗಾಳಿಯ ಸೇವನೆ ಮಾತ್ರ ಅವಳ ಜೀವವನ್ನು ಹಿಡಿದಿಟ್ಟಿತ್ತು” ಎನ್ನುತ್ತದೆ ಪುರಾಣ.

ಇನ್ನು ದೇವತೆಗಳ ವಿಷಯ. ಯಜಮಾನನು ನಡೆಸುವ ಯಜ್ಞದಲ್ಲಿ (ಸಮಾವೇಶದಲ್ಲಿ) ಕೊಡುವ ಹವಿಸ್ಸನ್ನು ಮಾತ್ರ ಅವರು ಸ್ವೀಕರಿಸಿದ ಮಾತು ಋಗ್ವೇದದಲ್ಲಿ ಬರುತ್ತದೆ. ಈ ಹವಿಸ್ಸು ಯಜಮಾನ ನೀಡುತ್ತ್ತಿದ್ದ ಸೋಮಪಾನ. ಈ ಸಂದರ್ಭದಲ್ಲಿ ‘ಸೇತುರಣಂ’ ಎಂಬ ಪದವನ್ನು ಋಗ್ವೇದ ಉಪಯೋಗಿಸುತ್ತದೆ. ಅಂದರೆ ಇಷ್ಟಪಟ್ಟು ಹಿಂಡಿದ ಸೋಮರಸವನ್ನು ದೇವತೆಗಳು ಕುಡಿಯುತ್ತಿದ್ದರು ಎಂದರ್ಥ. ಹಾಗಾಗಿ ಮುಂದೆ ಇದರ ಮೇಲೆ ವ್ಯಾಖ್ಯೆ ಮಾಡುವಾಗ, ದೇವತೆಗಳ ಅಮರತ್ವಕ್ಕೆ ಅವರು ಆಹಾರ ಸೇವಿಸದೇ ಹೋದರೂ ಚಟುವಟಿಕೆಯಿಂದ ಓಡಾಡುವುದಕ್ಕೆ ಕಾರಣ ಸೋಮಪಾನ ಎಂಬ ಮಾತು ಜನಜನಿತವಾಯಿತು. (ಹಾಗೆ ನೋಡಿದರೆ ದೇವತೆಗಳು ದಿನ ನಿತ್ಯ ಕುಡಿಯುವ ಪಾನೀಯ ಸೋಮಪಾನವಾಗಿರಲಿಲ್ಲ. ಯಜ್ಞದ ಯಜಮಾನ ದೇವತೆಗಳನ್ನು ವಿಶೇಷವಾಗಿ ಆಹ್ವಾನಿಸಿದಾಗ ಹಾಲು, ತುಪ್ಪ, ಜೇನಿನಿಂದ ಹದವಾಗಿ ಮಿಶ್ರಮಾಡಿದ ಆಗತಾನೇ ಹಿಂಡಿದ ಸೋಮರಸವನ್ನು ಸಿದ್ಧಪಡಿಸುತ್ತಿದ್ದ. ಅದನ್ನು ಹೆಚ್ಚಿಗೆ ಹೊತ್ತು ಇಡುವ ಹಾಗೂ ಇರಲಿಲ್ಲ.)

ಸೂರ್ಯಪಾನ ಎಂದರೇನು?
ನಾವು ನಮ್ಮ ದೈನಂದಿನ ಆಹಾರದ ಅಗತ್ಯಗಳಿಗೆ ಅಪ್ರತ್ಯಕ್ಷವಾಗಿ ಸೂರ್ಯನನ್ನು ಆಶ್ರಯಿಸಿದ್ದೇವೆ. ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಂಡು ಸಸ್ಯಜಾತಿಗಳು, ಅವುಗಳನ್ನು ಆಹಾರವಾಗಿಸಿಕೊಂಡು ಪ್ರಾಣಿ ಜಾತಿಗಳು ಬೆಳೆಯುತ್ತವೆ. ಮನುಷ್ಯ ಸಸ್ಯಜನ್ಯ ಆಹಾರವನ್ನಾಗಲೀ, ಪ್ರಾಣಿಜನ್ಯ ಆಹಾರವನ್ನಾಗಲೀ ಉಪಯೋಗಿಸಿಕೊಂಡು ತನ್ನ ದೈನಂದಿನ ಶಕ್ತಿಯ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾನೆ ಎಂಬುದು ಇದರರ್ಥ.

ಈ ಅಪ್ರತ್ಯಕ್ಷ ಮಾರ್ಗವನ್ನು ಬಿಟ್ಟು, ಮನುಷ್ಯನು ನೇರವಾಗಿ ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಳ್ಳುವಂತಾದರೆ? ಸಸ್ಯಗಳು ತಮ್ಮಲ್ಲಿರುವ ಕ್ಲೋರೋಫಿಲ್ ಉಪಯೋಗಿಸಿ ತಮಗೆ ಬೇಕಾದ ಆಹಾರವನ್ನು, ಶಕ್ತಿಯನ್ನು ಉಪಯೋಗಿಸುವಂತೆ, ಮನುಷ್ಯನೂ ತನ್ನ ದೇಹದಲ್ಲೇ ಶಕ್ತಿಯನ್ನು ಸೂರ್ಯನಿಂದ ಪಡೆಯುವಂತಾದರೆ? ಆಗ ಮನುಷ್ಯನಿಗೆ ಆಹಾರದ ಅಗತ್ಯ ಬೀಳುವುದಿಲ್ಲ. ಅವನು ನೇರವಾಗಿ ಸೂರ್ಯನಿಂದ ಶಕ್ತಿಯನ್ನು ಪಡೆದು ತನ್ನ ದೈಹಿಕ ಅಗತ್ಯಗಳಿಗೆ ಬೇಕಾದಂತೆ ಈ ಶಕ್ತಿಯನ್ನು ಮಾರ್ಪಡಿಸಿಕೊಳ್ಳಬಲ್ಲ. ಆಹಾರವೇ ದೇಹದ ದೋಷಗಳಿಗೂ, ಸಾಮಾಜಿಕ ಕಲಹಕ್ಕೂ ಕಾರಣ, ಈ ಮೂಲವನ್ನೇ ಕಿತ್ತೆಸಿದರೆ ತಾವೇ ತಾನಾಗಿ ದೇಹದ ಆರೋಗ್ಯ ಸಾಮಾಜಿಕ ಶಾಂತಿ ನೆಲೆಸುತ್ತದೆ.
ಈ ರೀತಿ ಸೂರ್ಯನ ಶಕ್ತಿಯನ್ನು ಪಡೆಯುವ ಕ್ರಿಯೆ ಕಣ್ಣಿನ ಮೂಲಕವಾಗಲೀ, ಚರ್ಮದ ಮೂಲಕವಾಗಲಿ ಅಥವಾ ದೇಹದ ಇನ್ಯಾವುದೇ ಅಂಗದ ಮೂಲಕವಾಗಲಿ ನಡೆಯಬಹುದು. ಮನುಷ್ಯ ಹುಟ್ಟಿದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸೂರ್ಯನ ಶಕ್ತಿಯನ್ನು ಪಡೆಯುತ್ತಳೇ ಇದ್ದಾನೆ. ಸೂರ್ಯನಿಂದ ಹೊರಡುವ ವಿಶ್ವ ಕಿರಣಗಳು  ಸತತವಾಗಿ ದೇಹದ ಮೂಲಕ ಹರಿದುಹೋಗುತ್ತಿರುತ್ತದೆ. ಆದರೆ ಸದ್ಯಕ್ಕೆ ದೈಹಿಕ ಅಗತ್ಯಗಳಿಗೆ ಮಾರ್ಪಡಿಸಬಲ್ಲ ತಂತ್ರ ನಮಗೆ ಹಸ್ತಗತವಾಗಿದೆ. ಅದನ್ನೇ ನಾವು ‘ಸೂರ್ಯಪಾನ’ ಎಂದು ಸಂಕೇತಿಸುತ್ತೇವೆ.

ಋಗ್ವೇದದಲ್ಲಿ ಸೂರ್ಯಪಾನ:
ಋಗ್ವೇದದಲ್ಲಿ ಸೂರ್ಯಪಾನದ ಮಾತು ಬರುತ್ತದೆ. ಋಗ್ವೇದದ ಉದ್ದಕ್ಕೂ ನಮಗೆ ದೇವತೆಗಳ, ಋಷಿಗಳ ಸಾಹಚರ್ಯ ಮನುಷ್ಯನ ಜೊತೆ ಕಂಡು ಬರುತ್ತದೆ. ನಂತರದ ದಿನಗಳಲ್ಲಿ ಇವೆಲ್ಲ ಕಲ್ಪನೆಯ ಮಾತುಗಳು ದೇವತಾ ವಿಷಯಗಳನ್ನು ತಿಳಿಯುವ ಪ್ರಯತ್ನಗಳು, ತತ್ವ ವೇದಾಂತಗಳನ್ನು ತಿಳಿಸುವ ಛದೋಬದ್ಧ ಮಾತುಗಳು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಋಗ್ವೇದದ ಋಕ್‍ಗಳನ್ನು ಯಥಾವತ್ತಾಗಿ ಅರ್ಥೈಸಿದರೆ, ನಮಗೆ ದೇವತೆಗಳು, ಋಷಿಗಳು ಮೇಲ್‍ಸ್ತರದ ಸಾಮಾಜಿಕ ಜೀವಿಗಳು, ಇಂದ್ರ, ಅಗ್ವಿ, ವರುಣ, ಅಶ್ವಿನಿ ಇತ್ಯಾದಿ ದೇವತೆಗಳು ಪರಮಪೂಜ್ಯರು, ಗೌರವಾರ್ಹರು. ಅಷ್ಟೇ ಅಲ್ಲ ಭಯಪಡಬೇಕಾದವರು. ಅವರನ್ನು ಆಧರಿಸಿ ಗೌರವಿಸಬೇಕಾದ್ದು ಮನುಷ್ಯದ ಕರ್ತವ್ಯ. ದೇವತೆಗಳನ್ನು ಸಂತೃಪ್ತರನ್ನಾಗಿಸಲು ಮನುಷ್ಯನ ಪೈಕಿ ಉಳ್ಳವನು ರಾಜ್ಯಾಡಳಿತ ನಡೆಸುವವನು (ಯಜಮಾನ) ಆಗಾಗ್ಗೆ ಯಜ್ಞಗಳನ್ನು ನಡೆಸುತ್ತಿದ್ದ. ಈ ಯಜ್ಞಗಳು ಮನುಷ್ಯರು ದೇವತೆಗಳ ಪೂಜೆಗೆ ಏರ್ಪಡಿಸಿದ ಸಮಾವೇಶಗಳಾಗಿರುತ್ತಿದ್ದವು. (ಯಜ್ಞೇನ ಯಜ್ಞಮಯಂತ ದೇರ್ವಾ)

ಯಜಮಾನನು ತನಗೆ ಪ್ರಿಯವಾದ, ತನ್ನ ಬೆಂಬಲಕ್ಕೆ ನಿಲ್ಲಬಲ್ಲ ದೇವತೆಯನ್ನು ಈ ಯಜ್ಞಕ್ಕೆ ಆಹ್ವಾನಿಸುತ್ತಿದ್ದ. ಹಾಗೆ ಆಹ್ವಾನಿಸುವಾಗ ಪ್ರಧಾನವಾಗಿ ಅಗ್ನಿಯ (ಜಾತವೇದಃ) ನೆರವನ್ನು ಪಡೆಯುತ್ತಿದ್ದ. ಇಂದ್ರನನ್ನು ಕರೆಯಲಾಗಲೀ, ಅಶ್ವಿನಿ ದೇವತೆಗಳನ್ನು ಕರೆಯಲಾಗಲೀ, ಅಷ್ಟೇಕೆ ಅಪ್ರಧಾನವಾದ ಮರುತ್ ದೇವತೆಗಳನ್ನು ಕರೆಯಲಾಗಲೀ ಅವನಿಗೆ ಅಗ್ನಿಯೇ ಬೇಕು. ತಮ್ಮ ಮಾತನ್ನು ತಳ್ಳಿ ಹಾಕಿದರೂ, ಅಗ್ನಿಯ ಮೂಲಕ ಹೇಳಿ ಕಳುಹಿಸಿದರೆ ತಳ್ಳಿಹಾಕುವುದಿಲ್ಲ ಎಂಬ ಬಗ್ಗೆ ನಂಬಿಕೆಯಿದ್ದಿರಬೇಕು. ಹಾಗಾಗಿ ಲಕ್ಷ್ಮೀ ಮಾತೆಯನ್ನು ಕರೆಯುವಾಗಲೂ, ‘ತಾಂ ಮ ವಹ ಜಾತವೇದೋ ಲಕ್ಷ್ಮೀಂ ಅನಪಗಾಮಿನೀಂ’ ಎಂದು ಅಗ್ನಿಯನ್ನು ಯಜಮಾನ ಪ್ರಾರ್ಥಿಸಿಕೊಳ್ಳುತ್ತಾನೆ.

ಹೀಗೆ ಯಜಮಾನ ಪರವಾಗಿ ವಿನಂತಿ ಮಾಡುವ ತಿಳುವಳಿಕೆಯುಳ್ಳ ವ್ಯಕ್ತಿಯೇ ಋಷಿ. ಪ್ರಧಾನವಾಗಿ ಕಾಣುವ ಇಪ್ಪತ್ತು-ಮೂವತ್ತು ಋಷಿಗಳ ಜೊತೆಗೆ, ಅವರ ವಂಶದಲ್ಲಿ ಹುಟ್ಟಿದ ನಾಲ್ಕುನೂರಕ್ಕೂ ಮಿಕ್ಕ ಋಷಿಗಳು, ಋಷಿಕುಮಾರರು ಋಗ್ವೇದದ ಋಕ್‍ಗಳ ದ್ರಷ್ಟಾರರಾಗಿ ಕಾಣಿಸಿಕೊಳ್ಳುತ್ತಾರೆ.ಋಷಿಗಳ ಮಗ ಋಷಿಯಾಗಲೇಬೇಕು ಎಂದಾಗಲೀ, ದೇವತೆಗಳ ದೇವತೆಯಾಗಬೇಕು ಎಂದಾಗಲೀ ಕಠಿಣವಾದ ನಿಯಮ-ಆಗೇನೂ ಇರಲಿಲ್ಲ. ಹಾಗಾಗಿ ದೇವತೆ ಸೂರ್ಯನ ವಂಶಸ್ಥನಾದ ಚಕ್ಷುಃ ಎಂಬ ಥಷಿಯು ದೇವತಾಶಕ್ತಿಯಾದ ಸೂರ್ಯನ ಹತ್ತನೇ ಮಂಡಲದ 158ನೇ ಸೂಕ್ತದಲ್ಲಿ ಸುರ್ಯೋಪಾದನೆಯ ಮಾತುಗಳನ್ನು ಆಡುತ್ತಾನೆ. ದೇವತಾವ್ಯಕ್ತಿ ಸೂರ್ಯ ಮತ್ತು ದೇವತಾಶಕ್ತಿ ಸೂರ್ಯನ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಇಂದಿನ ಕಾಲದಲ್ಲೂ ನಾವು ದೇವತಾಸ್ವರೂಪಿಯ (ರಾಮ, ಕೃಷ್ಣ, ಶ್ರೀನಿವಾಸ ಇತ್ಯಾದಿ..) ಹೆಸರುಗಳನ್ನು ನಮ್ಮ ಮಕ್ಕಳಿಗೆ ಇಡುತ್ತೇವೆ. ಆದರೆ ಅವೇ ಹೆಸರಿನ ದೇವತಾಶಕ್ತಿಗಳ ಮಾತು ಬಂದಾಗ, ನಮ್ಮ ಮನಸ್ಸಿನಲ್ಲಿ ಯಾವುದೇ ಸಂದೇಹವಿರುವುದಿಲ್ಲ.

ಈ ಸೂರ್ಯ ಸೂಕ್ತದಲ್ಲಿ ಋಷಿ ಚಕ್ಷುಃವು ಸೂರ್ಯನು ಪ್ರಾಣಿಗಳಿಗೆ ನೀಡುವ ಜೀವನಾಧಾರವನ್ನು ಮಾತ್ರವಲ್ಲದೇ, ಅವನು ನೀಡುವ ರಕ್ಷಣೆಯನ್ನು ನೆನಪಿಸಿಕೊಳ್ಳುತ್ತಾನೆ. ಹಾಗೆಯೇ ಪ್ರಾರ್ಥನೆಯಾಗಿ ಹೀಗೆ ಹೇಳಿಕೊಳ್ಳುತ್ತಾನೆ. “ಸೂರ್ಯ, ನಿನ್ನ ತೇಜಸ್ಸನ್ನು ನಾವು ಕುಡಿಯುವಂತಾಗಲಿ, ನಾವು ನಿನ್ನನ್ನು ನೋಡುವಂತಾಗಲೀ ಹಾಗೂ ನಿನ್ನ ಪ್ರಕಾಶದಿಂದ ಬೆಳಗುವ ಎಲ್ಲವನ್ನೂ ನಾವು ನೋಡುತ್ತಿರುವಂತಾಗಲಿ”.

ಸೂರ್ಯಪಾನದ ವೈಜ್ಞಾನಿಕ ಹಿನ್ನೆಲೆ:
ಸೂರ್ಯನಿಂದ ಸಮಸ್ತ ಕಿರಣ ತರಣಗಗಳು ಹೊರಡುತ್ತವೆ ಎಂಬುದು ನಮಗೆ ತಿಳಿದಿದೆ. ಇದನ್ನು ವಿದ್ಯುದಯಸ್ಕಾಂತೀಯ ತರಂಗಗಳು ಎಂದು ನಾವು ಕರೆಯುತ್ತೇವೆ. ವಿದ್ಯುತ್ ತರಂಗಗಳಿಂದ ಹಿಡಿದು ವಿಶ್ವಕಿರಣಗಳವರೆಗೆ ವಿಶಾಲವಾದ ತರಂಗ ಜಾಲವನ್ನು ಸೂರ್ಯ ಬಿಡುಗಡೆ ಮಾಡುತ್ತಾನೆ. ಇಷ್ಟು ವಿಶಾಲವಾದ ತರಂಗಮಾನದಲ್ಲಿ (ಕೋಟಿ ಕಿಲೀಮೀಟರ್ ತರಂಗಮಾನದಿಂದ ಹಿಡಿದು ನ್ಯಾನೋ ಮೀಟರ್ ತರಂಗಮಾನದವರೆಗೆ) ನಾವು ಕಣ್ಣಿಂದ ನೋಡುವುದು ಕೇವಲ ಬೆಳಕಿನ ಚಿಕ್ಕ ತರಂಗಮಾನ. 4000 ಆಂಗ್‍ಸ್ಟ್ರಾಮ್‍ನಿಂದ (ಕೆಂಪು) ಹಿಡಿದು 8000 ಆಂಗ್‍ಸ್ಟ್ರಾಮ್‍ನವರೆಗೆ (ನೇರಳೆ) ಹರಡುವ ಅತ್ಯಂತ ಚಿಕ್ಕ ಬೆಳಕಿನ ತರಂಗಮಾನವನ್ನು ಮಾತ್ರ.

ಇರದರ್ಥ ನಮ್ಮ ದೇಹದ ಅಂಗವಾದ ಕಣ್ಣಿಗೆ ತನ್ನದೇ ಆದ ಮಿತಿಯಿದೆ. ಇದೇ ರೀತಿ ಬೇರೆ ಬೇರೆ ಇಂದ್ರಿಯಗಳಿಗೂ-ಕಿವಿ, ಚರ್ಮ, ಮೂಗು ಇತ್ಯಾದಿ- ತನ್ನದೇ ಆದ ಮಿತಿಗಳಿವೆ. 16 ರಿಂದ 17 ಸಾವಿರದ ಶಬ್ಧ ತರಂಗಗಳನ್ನು ಕೇಳಬಲ್ಲದು. ಆದರೆ ಆಚೆ-ಈಚೆಯ ಶಬ್ದಗಳನ್ನು ಕಿವಿ ಕೇಳಲಾಗದು. ಕೆಲವು ವಾಸನೆಗಳನ್ನು ಮಾತ್ರ ಗ್ರಹಿಸಬಲ್ಲದು, ಎಲ್ಲವನ್ನಲ್ಲ. ಕೆಲವು ರುಚಿಗಳನ್ನು ನಾಲಿಗೆ ಗ್ರಹಿಸಬಲ್ಲದು, ಎಲ್ಲವನ್ನಲ್ಲ.

ಹಾಗೆಂದು ಪ್ರಕೃತಿಯಲ್ಲಿ ಇದೇ ಇತಿಮಿತಿಗಳು ಉಳಿದುಕೊಂಡಿವೆಯೇ ಎಂದರೆ, ಹಾಗೇನೂ ಅಲ್ಲ. ಮನುಷ್ಯನಿಗೆ ಹತ್ತಿರವಾದ ಪ್ರಾಣಿ ನಾಯಿ ಶಬ್ಧಾತೀತ ತರಂಗಗಳನ್ನು ಕೇಳಬಲ್ಲದು. ನಮಗೆ ಗೊತ್ತಾಗದ ಅನೇಕ ವಾಸನೆಗಳನ್ನು ಅದು ಗ್ರಹಿಸಬಲ್ಲದು. ಅಷ್ಟೇಕೆ ತನ್ನ ಸಂಒರ್ಕಕ್ಕೆ ಬರುವ ವ್ಯಕ್ತಿ ಹೆದರಿದ್ದಾನೆಯೇ, ಕೋಪಗೊಂಡಿದ್ದಾನೆಯೇ ಗಂಭೀರವಾಗಿದ್ದಾನೆಯೇ ಎಂಬಂತಹ ಭಾವನೆಗಳನ್ನು ಅದು ಗ್ರಹಿಸಬಲ್ಲದು.

ಸೂರ್ಯಪಾನವನ್ನು ಮಾಡುವ ಸಮಯ:
ಸೂರ್ಯಪಾನವನ್ನು ಬೆಳಿಗ್ಗೆ ಸೂರ್ಯ ಹುಟ್ಟಿದ ಒಂದು ಘಂಟೆಯೊಳಗೆ ಅಥವಾ ಸಂಜೆ ಸೂರ್ಯ ಮುಳುಗುವುದಕ್ಕೆ ಒಂದು ಘಂಟೆ ಮುಂಚೆ ಮಾಡಬಹುದು. ಈ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಸೂರ್ಯವನ್ನು ನೇರವಾಗಿ ದಿಟ್ಟಿಸಿ ನೋಡುವುದು ನಿಷಿದ್ಧ. ಸೂರ್ಯಪಾನ ಮಾಡುವವರು ಬೆಳಿಗ್ಗೆ ಅಥವಾ ಸಂಜೆಯ ಯಾವುದಾದರೂ ಒಂದು ಕಾಲವನ್ನು ಆರಿಸಿಕೊಳ್ಳಬಹುದು.

ಸೂರ್ಯಪಾನದ ಕಾಲ:
ಆರಂಭ ಮಾಡಿದ ಮೊದಲ ದಿನ ಹತ್ತು ಸೆಕೆಂಡ್‍ಗಳಷ್ಟು ಕಾಲ ಸೂರ್ಯಪಾನ ಮಾಡಬೇಕು. ನಂತರ ಪ್ರತಿದಿನ ಹತ್ತು ಸೆಕೆಂಡ್‍ಗಳಷ್ಟು ಕಾಲ ಸೂರ್ಯನನ್ನು ದಿಟ್ಟಿಸಿ ನೋಡುವ ಸಮಯವನು ಹೆಚ್ಚಿಸುತ್ತಾ ಹೋಗಬೇಕು. ಅಂದರೆ ಎರಡನೆ ದಿನ ಇಪ್ಪತ್ತು ಸೆಕೆಂಡ್, ಮೂರನೆಯ ದಿನ ಮೂವತ್ತು ಸೆಕೆಂಡ್, ಹೀಗೆ ಇದರಿಂದ ಒಂದು ತಿಂಗಳು ಕಳೆಯುವ ವೇಳೆಗೆ ಐದು ನಿಮಿಷಗಳ ಸೂರ್ಯಪಾನ ಮಾಡುವ ಕ್ಷಮತೆ ನಿಮಗೆ ದೊರೆಯುತ್ತದೆ.

ಹೀಗೆಯೇ ಮುಂದುವರೆಸಿ, ಮೊದಲೆಯ ಹಂತವಾದ ಮೂರು ತಿಂಗಳ ಅಂತ್ಯದಲ್ಲಿ ನಿಮಗೆ 15 ನಿಮಿಷಗಳ ಕಾಲ ಸೂರ್ಯಪಾನ ಸಿದ್ಧಿಸಿರುತ್ತದೆ. ಮತ್ತೆ ಮುಂದುವರಿಸಿ ಎರಡನೆಯ ಹಂತವಾದ ಆರನೆಯ ತಿಂಗಳವರೆಗೆ ಹೋಗಿ, ಆ ವೇಳೆಗೆ ನೀವು ಮೂವತ್ತು ನಿಮಿಷ ಸೂರ್ಯಪಾನವನ್ನು ಮಾಡಬಲ್ಲಿರಿ, ಮತ್ತೂ ಮುಂದುವರಿಸಿ ಮೂರನೆಯ ಹಂತವಾದ ಒಂಬತ್ತು ತಿಂಗಳನ್ನು ಮುಗಿಸಿರಿ. ಇದು ನಿಮ್ಮ ಕಡೆಯ ಹಂತ. ನೀವು ಆಗ ನಲವತ್ತೈದು ನಿಮಿಷಗಳ ಸೂರ್ಯಪಾನವನ್ನು ಮಾಡುವ ಹಂತವನ್ನು ಮುಟ್ಟಿರುತ್ತೀರಿ.

ಸೂರ್ಯಪಾನವನ್ನು ಮಾಡುವ ರೀತಿ:
ಸೂರ್ಯಪಾನವನ್ನು ಬರಿಗಾಲಿನಲ್ಲಿ ನೆಲದ ಮೇಲೆ ನಿಂತು ಮಾಡಬೇಕು. ಪಾದ ನೆಲದ ಮಣ್ಣನ್ನೋ ಕಲ್ಲನ್ನೂ ಮುಟ್ಟುತ್ತಿರಬೇಕು. ಅಂದರೆ ಭೂಮಿಯ ಜೊತೆ ಸ್ಪಷ್ಟವಾಗಿ ಪಾದಸ್ಪರ್ಶವಾಗಬೇಕು. ನಮ್ಮ ದೇಹ ಒಂದು ಉತ್ತಮ ವಿದ್ಯುತ್ವಾಹಕ ಎಂಬುದು ನಿಮ್ಮ ಗಮನದಲ್ಲಿರಲಿ. ಸೂರ್ಯಪಾನ ಯಶಸ್ವಿಯಾಗಬೇಕಾದರೆ ನಿಮ್ಮ ದೇಹದ ಮೂಲಕ ಸೂರ್ಯಶಕ್ತಿ ಹಾದು ಹೋಗುವಂತಾಗಬೇಕು. ಸೂರ್ಯವನ್ನು ಬರಿಗಣ್ಣಿನಿಂದ ನೋಡಬೇಕು.
ಸೂರ್ಯನನ್ನು ನೋಡುವಾಗ ಅದಷ್ಟು ರೆಪ್ಪೆ ಅಲುಗಿದರೆ ಚಿಂತೆ ಮಾಡುವ ಅಗತ್ಯವಿಲ್ಲ. ಅಭ್ಯಾಸ ಮುಂದುವರೆದಂತೆ, ಕಾಲಕ್ರಮೇಣ ಸೂರ್ಯನನ್ನು ರೆಪ್ಪೆ ಅಲುಗಿಸದೆ ದಿಟ್ಟಿಸಿ ನೋಡುವ ಕಲೆ ಸಿದ್ಧಿಸುತ್ತದೆ. ಸೂರ್ಯಪಾನದ ವೇಳೆ ಕಣ್ಣು ಸ್ಥಿರವಾಗದೆ ಅತ್ತಿತ್ತ ಓಡಾಡುತ್ತಿತ್ತು ಎಂಬ ಬಗ್ಗೆ ವ್ಯರ್ಥವಾಗಿ ಚಿಂತೆ ಮಾಡಬೇಡಿ.

ಸೂರ್ಯಪಾನದ ಜೊತೆಗೆ ಕಾಲ್ನಡಿಗೆ ಅಂದರೆ ಬರೀ ಕಾಲಿನಲ್ಲಿ ಕಡೆಯ ಪಕ್ಷ ನಲವತ್ತೈದು ನಿಮಿಷಗಳ ಕಾಲ ನಡೆಯಬೇಕು. ಸೂರ್ಯಪಾನವನ್ನು ನಿಲ್ಲಿಸಿದ ನಂತರವೂ ನಾವು ಭೂಮಿಯ ಸಂಪರ್ಕದಲ್ಲಿರುವವರೆಗೆ ಮಾಡುತ್ತಿರಬೇಕು. ಹೀಗೆ ನಡೆಯುವಾಗ ಮರಳಿನ ನೆಲವನ್ನು ಆತಿಸಿಕೊಳ್ಳಿ. ಹುಲ್ಲು ಇರುವ ನೆಲ ಖಂಡಿತ ಬೇಡ. ಸಾಧಾರಣವಾದ ವೇಗವನ್ನು ನಿಮ್ಮ ನಡೆಗೆಗೆ ಆರಿಸಿಕೊಳ್ಳಿ, ಜಾಗಿಂಗ್ ಮಾಡುವವರಂತಾಗಳಿ, ಓಟದಲ್ಲಿ ಪಾಲುಗೊಳ್ಳುವವರಂತಾಗಲಿ ನೀವು ನಡೆಯಬೇಕಿಲ್ಲ, ನೀವು ನಡೆಯುವಾಗ ನಿಮ್ಮ ಪಾದ ನೆಲೆವನ್ನು ಸಂಪೂರ್ಣವಾಗಿ ಮುಟ್ಟುತ್ತಿರಲಿ. ಕಾಲ್ನಡಿಗೆಯನ್ನು ಯಾವಾಗ ಬೇಕಾದರೂ ಮಾಡಬಹುದು. ಸೂರ್ಯನಮ ಕಿರಣಿ ನೆಲದ ಮೇಲೆ ಬೀಳುತ್ತಿರುವಾಗ ಮಾಡುವುದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.

ಸೂರ್ಯಪಾನದ ಪ್ರಯೋಜನ:
ಸೂರ್ಯಪಾನವನ್ನು ಆರಂಭಿಸುತ್ತಿದ್ದಂತೆ ನಿಮ್ಮ ದೇಹದಲ್ಲಿ ತಿಂಗಳಾಗುತ್ತಿದ್ದಂತೆಯೇ ನಿಮ್ಮ ದೇಹದಲ್ಲಿ ಲವಲವಿಕೆ ಕಂಡು ಬರುತ್ತದೆ. ಮೂರು ತಿಂಗಳ ಮೊದಲ ಹಂತ ಮುಟ್ಟುತ್ತಿದ್ದಂತೆ, ನಿಮ್ಮ ಸಣ್ಣಪುಟ್ಟ ಕಾಯಿಲೆಗಳು ಮಾಯವಾಗುತ್ತವೆ. ಆಹಾರದಲ್ಲಿ ಕಡಿತ ಮಾಡಬೇಕು ಎನಿಸುತ್ತದೆ. ದೇಹದಲ್ಲಿ ಆಲಸ್ಯ ಮಾಯವಾಗಿ ಬಿಡುತ್ತದೆ. ಆರು ತಿಂಗಳ ಎರಡನೆಯ ಹಂತ ದಾಟುತ್ತಿದ್ದಂತೆ ದೇಹದಲ್ಲಿ ಮಹತ್ತರ ಬದಲಾವಣೆ ಗೋಚರಿಸುತ್ತದೆ. ನಿಮ್ಮ ದೇಹದ ಹಿರಿಯ ಕಾಯಿಲೆಗಳು ಓಡಿಹೋಗಲು ಆರಂಭಿಸುತ್ತವೆ. ನಿಮಗೆ ಆಹಾರ ವಿಷಯದಲ್ಲಿ ಆನಾಸಕ್ತಿ ಮೂಡುತ್ತದೆ. ಹಾಗಾಗಿ ನೀವು ತೆಗೆದುಕೊಳ್ಳುವ ಆಹಾರದ ಪ್ರಮಾಣ ಕಡಿಮೆಯಾಗುತ್ತದೆ. ಒಂಬತ್ತು ತಿಂಗಳ ಮೂರನೆಯ ಹಂತ ತಲುಪುತ್ತಿದ್ದಂತೆ ನಿಮಗೆ ಆಹಾರದ ಅಗತ್ಯ ಕಂಡುಬರುವುದಿಲ್ಲ. ನಿಮ್ಮ ಕಾಯಿಲೆಗಳು ದೂರ ಓಡಿಹೋಗುತ್ತದೆ. ವಿಟಮಿನ್ ‘ಎ’ ಹಾಗೂ ‘ಡಿ’ ರವೆರಡೂ ನೇರವಾಗಿ ಸೂರ್ಯಪಾನದ ವೇಳೆ ನಮ್ಮ ದೇಹಕ್ಕೆ ದೊರೆಯುವುದರಿಂದ ನಿಮ್ಮ ದೇಹ ಹಗುರವಾಗಿದ್ದು ನೀವು ಆರೋಗ್ಯದ ಅತ್ಯುಚ್ಚ ಮಟ್ಟವನು ಮುಟ್ಟುತ್ತೀರಿ. ಇದು ನಿಮ್ಮ ಆಧ್ಯಾತ್ಮಕ ಸಾಧನೆಯ ಹಂತವೂ ಹಂತದ ಉನ್ನತ ಹಂತವನ್ನು ಮೂರನೆಯ ಹಂತದ ಕಡೆಯಲ್ಲಿ ನೀವೂ ಮುಟ್ಟಬಲ್ಲಿರಿ.

ಕಣ್ಣಿನ ವೈದ್ಯರಿಂದ ಪರೀಕ್ಷೆ:
ಈ ತೆರವಾದ ಸೂರ್ಯಪಾನದಿಂದ ಕಣ್ಣಿಗೆ ಯಾವುದೇ ತೊಂದರೆಯಾಗುವುದಿಲ್ಲ. ಬದಲಾಗಿ ಕಖ್ಣಿನ ದೋಷಗಳು ನಿವಾರಣೆಯಾಗುತ್ತವೆ. ಏನೇ ಆಗಲಿ ಸೂರ್ಯಪಾನವನ್ನು ಆರಂಭಿಸುವ ಮೊದಲು ಕಣ್ಣಿನ ವೈದ್ಯರಿಗೆ ನಿಮ್ಮ ಕಣ್ಣಿನ ಸ್ಥಿತಿಯನ್ನು ತೋರಿಸಿ. ಸೂರ್ಯಪಾನ ಆರಂಭಿಸಿದ ನಂತರ ಮೂರು ತಿಂಗಳಿಗೊಮ್ಮೆ ನಿಮ್ಮ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುತ್ತಿರಿ. ಇದರಿಂದ ನಿಮ್ಮ ಕಣ್ಣಿನಲ್ಲಾದ ಉತ್ತಮ ಬದಲಾವಣೆ ನಿಮಗೇ ಗೊತ್ತಾಗುತ್ತದೆ.

ಸಾರಾಂಶ ಸೂರ್ಯಪಾನ ನಮ್ಮ ಋಷಿ ಮುನಿಗಳು, ದೇವತೆಗಳು ನಿರಾಹಾರ ಜೀವನವನ್ನು ಅಳವಡಿಸಿಕೊಳ್ಳಲು ಸಾಧಿಸಿಕೊಂಡಿದ್ದ ತಂತ್ರ, ಇದರಿಂದ ದೈಹಿಕ ಆರೋಗ್ಯವನ್ನು ಪಡೆಯುವುದಲ್ಲದೆ ಮನುಷ್ಯನ ಆಹಾರದ ಮೇಲಿನ ಅವಲಂಬನೆ ತಪ್ಪುತ್ತದೆ. ಸೂರ್ಯಪಾನದ ಸಿದ್ಧಿ ಪಡೆಯುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯವನ್ನು ಆಧ್ಯಾತ್ಮದಲ್ಲಿ ಪ್ರಗತಿಯನ್ನು ಸಾಧಿಸಬಹುದು.

Related posts

ಮೀನು ಕೃಷಿಯಿಂದ ಉತ್ತಮ ಲಾಭ ಗಳಿಸಲು ರೈತರು ಮುಂದಾಗಬೇಕು: ಶ್ರೀಸ್ವಾಮಿ

Times fo Deenabandhu

ಧಾರವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್…

ಲಾಕ್ ಡೌನ್ ಹಿನ್ನೆಲೆ ಖುದ್ದು ಫೀಲ್ಡ್ ಗಿಳಿದ ಶಿವಮೊಗ್ಗ ಎಸ್ ಪಿ: ನೂರಾರು ಬೈಕ್ ಮತ್ತು ಆಟೋಗಳು ಸೀಜ್