March 22, 2021
Public Voice
  • Home
  • ಜಿಲ್ಲೆ
  • ಡಿ.26ರಂದು ಜಿಲ್ಲಾ ವಾಣಿಜ್ಯ ಮತು ್ತಕೈಗಾರಿಕಾ ಸಂಘದ ವತಿಯಿಂದ ಸಂಸ್ಥಾಪಕರ ದಿನಾಚರಣೆ
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಡಿ.26ರಂದು ಜಿಲ್ಲಾ ವಾಣಿಜ್ಯ ಮತು ್ತಕೈಗಾರಿಕಾ ಸಂಘದ ವತಿಯಿಂದ ಸಂಸ್ಥಾಪಕರ ದಿನಾಚರಣೆ

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತು ್ತಕೈಗಾರಿಕಾ ಸಂಘದ ವತಿಯಿಂದ ಡಿ.26ರಂದು ಸಂಜೆ 4 ಗಂಟೆಗೆ ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಸಂಸ್ಥಾಪಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಜಿಲ್ಲೆಯ ಅಭಿವೃದ್ದಿಯ ಪಥದಲ್ಲಿ ತನ್ನದೇ ಪಾತ್ರ ವಹಿಸಿದ್ದು, ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುತ್ತಾ ಬಂದಿದೆ. ಅಭಿವೃದ್ದಿ ಕಾರ್ಯಕ್ರಮಗಳ ಜೊತೆ ಜನಪರ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಮಾದರಿ ಎನಿಸಿದೆ. ಅದರ ಭಾಗವೇ ವಾಣಿಜ್ಯೋದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಸಂಸ್ಥಾಪಕರ ದಿನಾಚರಣೆ ಆಯೋಜಿಸಲಾಗಿದೆ ಎಂದರು.
ಬಿ.ಹೆಚ್.ರಸ್ತೆಯಲ್ಲಿರುವ ದ ಮೈಸೂರು ಮೆಡಿಕಲ್ ಸ್ಟೋರ್ಸ್‍ನ ವಿವೇಕಾನಂದ ನಾಯಕ್ ಮತ್ತು ಪಾಲುದಾರರು, ಗಾಂಧಿಬಜಾರಿನ ಮೇ. ರಾಮಿ ಅಂಡ್ ಕೋ. ನ ವಿ.ಆರ್.ವಿಜಯಲಕ್ಷ್ಮಿ ಮತ್ತು ಮಕ್ಕಳು, ಹೊಸಮನೆಯ ಕನ್ಸಲ್ಟೆನ್ಸಿ ಹಿರಿಯ ಅಭಿಯಂತರ ಎ.ಟಿ.ಅನಂತ್‍ಕೃಷ್ಣಮೂರ್ತಿ 2020ರ ವಾಣಿಜ್ಯೋದ್ಯಮಿ ಪ್ರಶಸ್ತಿ ಪುರಸ್ಕøತರಾಗಿದ್ದಾರೆ. ಜೊತೆಗೆ ವಿಶೇಷ ಪುರಸ್ಕಾರವನ್ನು ಕಿಮ್ಮನೆ ಗಾಲ್ಪ್ ರೆಸಾರ್ಟ್‍ನ ಜಯರಾಮ್ ಜಿ. ಕಿಮ್ಮನೆ ಅವರಿಗೆ ನೀಡಲಾಗಿದೆ. ಇವರೆಲ್ಲರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಹಿರಿಯ ಉಪಾಧ್ಯಕ್ಷ ಐ.ಎಸ್.ಪ್ರಸಾದ್ ಅವರು ಆಗಮಿಸಲಿದ್ದಾರೆ. ಒಟ್ಟಾರೆ ಕೈಗಾರಿಕಾ ಸಂಘವು ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಪೂರಕ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ. ಎಲ್ಲ ಹಿಂದಿನ ಅಧ್ಯಕ್ಷರುಗಳ ಮಾರ್ಗದರ್ಶನದಲ್ಲಿ ಹಲವು ಸವಾಲುಗಳ ನಡುವೆಯೂ ಸಂಘ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಬಿ.ಆರ್.ಸಂತೋಷ್, ಬಿ.ಗೋಪಿನಾಥ್, ಕೆ.ಎಸ್.ಸುಕುಮಾರ್, ಎಂ.ಎಲ್.ಪ್ರತಾಪ್, ಬಿ.ಪಿ.ಸಂದೀಪ್, ವಸಂತ್ ಹೋಬಳಿದಾರ್ ಇದ್ದರು.

Related posts

ಶೀಘ್ರವೇ ವರಿಷ್ಠರಿಂದ ಸಿಹಿಸುದ್ಧಿ-ಸಿಎಂ ಬಿಎಸ್ ವೈ ವಿಶ್ವಾಸ……..

Public Voice

ಆಪ್ತ ಸಮಾಲೋಚನೆ ಸೌಲಭ್ಯ/ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ/ಮೂಲ ದಾಖಲಾತಿಗಳನ್ನು ಪಡೆದುಕೊಳ್ಳಲು ಸೂಚನೆ

Public Voice

ರೈತರಿಗೆ ಕಾಂಗ್ರೆಸ್ ಪ್ರಚೋದನೆ:  ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ-ಸಚಿವ ಶ್ರೀರಾಮುಲು

Public Voice