March 24, 2021
Public Voice
ಮುಖ್ಯಾಂಶಗಳು ರಾಜಕೀಯ ರಾಜ್ಯ

“ಜ. 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ” : ಸಿಎಂ ಬಿ.ಎಸ್.ವೈ

 

ಮೈಸೂರು : ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ. ಅದು ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಅದು ಅವತ್ತಿಗೆ ಗೊತ್ತಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ.13ರ ಮಧ್ಯಾಹ್ನ ಅಮಾವಾಸ್ಯೆ ಕಳೆಯುತ್ತದೆ. ಆ ನಂತರ ಒಳ್ಳೆಯ ಸಮಯ ಅಂತ ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸಮಯ ಕೇಳಿಕೊಂಡು ನಿಮಗೂ ಸಮಯ ತಿಳಿಸುತ್ತೇವೆ ಎಂದರು.

ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಮಾಡಬೇಕು ಎಂದು ಕೊಂಡಿದ್ದೇನೆ. ಹಣಕಾಸು ಪರಿಸ್ಥಿತಿ ತಕ್ಕಂತೆ ಸೂಕ್ತವಾದ ನಿರ್ಧಾರ ತೆಗೆದುಕೊಂಡು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡುತ್ತೇನೆ ಎಂದು ತಿಳಿಸಿದರು.

ಬೇರೆ ಮಠಗಳಿಗೆ, ಸಂಸ್ಥೆಗಳಿಗೆ ಸುತ್ತೂರು ಮಠ ಮಾದರಿ…

ಸುತ್ತೂರು ಮಠ ಜಾತಿ, ಮತ ಮೀರಿದ ಮಾನವೀಯ ಬಾಂಧವ್ಯವನ್ನು ಎಲ್ಲರ ಜೊತೆಗೂ ಹೊಂದಿದೆ. ಬೇರೆ ಮಠಗಳಿಗೆ, ಸಂಸ್ಥೆಗಳಿಗೆ ಸುತ್ತೂರು ಮಠ ಮಾದರಿಯಾಗಿದೆ. ಸುತ್ತೂರು ಮಠದ ಕಾರ್ಯವ್ಯಾಪ್ತಿ ಇನ್ನಷ್ಟು ಹೆಚ್ಚಾಗಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಆಶಯವ್ಯಕ್ತಪಡಿಸಿದರು.
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ 1061 ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದ ಅವರು, ಮಠದ ಕಾರ್ಯಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಈ ಸಂದರ್ಭ ಸುತ್ತೂರು ಪಂಚಾಂಗ ಹಾಗೂ ಕೃತಿ ಬಿಡುಗಡೆಗೊಳಿಸಿದರು. ಸುತ್ತೂರು ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಚಿವ ನಾರಯಣ ಗೌಡ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಎನ್.ಮಹೇಶ್,ನಿರಂಜನ್ ಕುಮಾರ್, ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಪ್ರಸಾದ್ ಮತ್ತೀತರರು ಉಪಸ್ಥಿತರಿದ್ದರು.

Related posts

ಬಿಜೆಪಿ ಜತೆ ಇದ್ದಿದ್ರೆ ಈಗಲೂ ರಾಜ್ಯದಲ್ಲಿ ನಾನೇ ಸಿಎಂ ಆಗಿರ್ತಿದ್ದೆ…

Public Voice

ಉನ್ನತಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನಕ್ಕೆ ಹೊಸ ಮಾನದಂಡ: ಅಮೀಯ ಕುಮಾರ್ ರಥ್

Public Voice

ಕೇಂದ್ರ ಸರ್ಕಾರದ ಬಜೆಟ್ ಅಭಿವೃದ್ಧಿಗೆ ಪೂರಕ- ಸಂಸದ ಬಿ.ವೈ.ರಾಘವೇಂದ್ರ

Public Voice