ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದ್ದು 4 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ.
3ನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ, ರಿಷಿಬ್ ಪಂತ್ 97(118 ಎಸೆತ, 12 ಬೌಂಡರಿ, 3 ಸಿಕ್ಸರ್) ಹನುಮ ವಿಹಾರಿ (23*ರನ್, 161 ಎಸೆತ, 4 ಬೌಂಡರಿ) ಹಾಗೂ ಅನುಭವಿ ಆರ್.ಅಶ್ವಿನ್ (39*ರನ್, 128 ಎಸೆತ, 7 ಬೌಂಡರಿ) ಜೋಡಿಯ ದಿಟ್ಟ ಪ್ರತಿಹೋರಾಟದ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಡ್ರಾ ಸಾಧಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಅಂತ್ಯಗೊಂಡ ಪಂದ್ಯದಲ್ಲಿ 2 ವಿಕೆಟ್ಗೆ 98 ರನ್ಗಳಿಂದ ಅಂತಿಮ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ 5 ವಿಕೆಟ್ಗೆ 334 ರನ್ಗಳಿಸಿ ಡ್ರಾ ಸಾಧಿಸಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 338 ರನ್ಗಳಿಸಿದರೆ, ಭಾರತ 244 ರನ್ ಗಳಿಸಿದ್ದ ಭಾರತ 94 ರನ್ ಹಿನ್ನಡೆ ಅನುಭವಿಸಿತು.
ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ಗೆ 312 ರನ್ ಗಳಿಸಿದ ಆಸ್ಟ್ರೇಲಿಯಾ 407ರನ್ ಗೆಲುವಿನ ಗುರಿ ನೀಡಿತ್ತು. ಗೆಲುವಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಚೇತೇಶ್ವರ್ ಪೂಜಾರ 77, ರಿಷಭ್ ಪಂತ್ 97,
ಹಿಂದಿನ ದಿನದಾಟದ ಮೊತ್ತಕ್ಕೆ ಯಾವುದೇ ಮೊತ್ತ ಪೇರಿಸದೆ ರಹಾನೆ ನಿರ್ಗಮಿಸಿದರೆ, ಬಳಿಕ ಬಂದ ರಿಷಭ್ ಪಂತ್ (97ರನ್, 118 ಎಸೆತ, 12 ಬೌಂಡರಿ, 3 ಸಿಕ್ಸರ್) ಪೂಜಾರ ಜತೆಗೂಡಿ ಬಿರುಸಿನ ಬ್ಯಾಟಿಂಗ್ ತೋರುವ ಮೂಲಕ ತಂಡದ ಪಾಳಯದಲ್ಲಿ ಗೆಲುವಿನ ಭರವಸೆ ನೀಡಿದರು. ಈ ಜೋಡಿ 3ನೇ ವಿಕೆಟ್ಗೆ 148 ರನ್ ಪೇರಿಸಿ ಬೇರ್ಪಟ್ಟಿತು. ಇದಾದ ಬಳಿಕ ಪೂಜಾರ ಕೂಡ ಚಹಾವಿರಾಮಕ್ಕೆ ಕೆಲಹೊತ್ತು ಬಾಕಿಇರುವಾಗಲೇ ನಿರ್ಗಮಿಸಿದರು. ಪೂಜಾರ ನಿರ್ಗಮನದೊಂದಿಗೆ ಭಾರತ, ಗೆಲುವಿನಾಸೆ ಕೈಚೆಲ್ಲಿತು. ಹನುಮ ವಿಹಾರಿ ಹಾಗೂ ಆರ್.ಅಶ್ವಿನ್ ಜೋಡಿ ಅಂತಿಮ ಅವಧಿಯಾಟ ಪೂರ್ತಿ ಕ್ರೀಸ್ನಲ್ಲಿ ನಿಲ್ಲುವ ಮೂಲಕ ಆಸೀಸ್ ಬೌಲರ್ಗಳುಗೆ ತಿರುಗೇಟು ನೀಡಿದರು.
ಆಸ್ಟ್ರೇಲಿಯಾ: 338 ಮತ್ತು 6 ವಿಕೆಟ್ಗೆ 312 ಡಿಕ್ಲೇರ್, ಭಾರತ : 244 ಮತ್ತು 5 ವಿಕೆಟ್ಗೆ 334 (ಚೇತೇಶ್ವರ್ ಪೂಜಾರ 77, ರಹಾನೆ 4, ರಿಷಭ್ ಪಂತ್ 97, ಹನುಮ ವಿಹಾರಿ 23 ಆರ್.ಅಶ್ವಿನ್ 39 ರನ್ ಬಾರಿಸಿದರು. ಆಸ್ಪ್ಟ್ರೇಲಿಯಾ ಪರ ಜೋಸ್ ಹ್ಯಾಸಲ್ವುಡ್ 39ಕ್ಕೆ 2, ನಥಾನ್ ಲ್ಯಾನ್ 114ಕ್ಕೆ 2, ಪ್ಯಾಟ್ ಕಮ್ಮಿನ್ಸ್ 72ಕ್ಕೆ 1 ವಿಕೆಟ್ ಪಡೆದರು. ಈ ಮೂಲಕ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
