March 23, 2021
Public Voice
  • Home
  • ಮುಖ್ಯಾಂಶಗಳು
  • ವಿವೇಕಾನಂದರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಲಹೆ: ಅಪರ ಜಿಲ್ಲಾಧಿಕಾರಿ ಡಾ.ಕುಮಾರ್
ಚಿಕ್ಕಮಗಳೂರು ಜಿಲ್ಲೆ ಮುಖ್ಯಾಂಶಗಳು

ವಿವೇಕಾನಂದರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಲಹೆ: ಅಪರ ಜಿಲ್ಲಾಧಿಕಾರಿ ಡಾ.ಕುಮಾರ್

ಚಿಕ್ಕಮಗಳೂರು,: ಸ್ವಾಮಿ ವಿವೇಕಾನಂದರ ಜಯಂತಿ ಕೇವಲ ಜನವರಿ ೧೨ ಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿ ದಿನ ಅವರ ಸಂದೇಶಗಳನ್ನು, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ  ಡಾ, ಕುಮಾರ್ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರದ ವತಿಯಿಂದ ಸರ್ಕಾರಿ ಪಿ.ಯು ಕಾಲೇಜು ಅವರಣದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವ ಸಪ್ತಾಹ ಮಾತು-ವಿವೇಕ-ಯುವ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋವೀಡ್-೧೯ ಹಿನ್ನೆಲೆಯಲ್ಲಿ ವಿವೇಕಾನಂದರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ, ವಿವೇಕಾನಂದರ ಬಗ್ಗೆ ಸಂಪೂರ್ಣವಾಗಿ ತಿಳಿಯುವುದು ಅಸಾಧ್ಯವಾದದ್ದು. ಅದೊಂದು ದೊಡ್ಡ ಸಮುದ್ರ, ಇಡೀ ವಿಶ್ವಕ್ಕೆ ಭಾರತ ದೇಶದ ಸನಾತನ ಧರ್ಮ ಹಾಗೂ ಹಿಂದುತ್ವದ ಬಗ್ಗೆ ವಿಶೇಷವಾಗಿ ಭಾವೈಕ್ಯತೆ ಹಾಗೂ ದೇಶಭಕ್ತಿಯ ಬಗ್ಗೆ ಪ್ರತಿಪಾದನೆ ಮಾಡಿರುವಂತಹ ಮಹಾನ್ ಚೇತನಾ, ಯುವಶಕ್ತಿಯ ಮೇಲೆ ನಂಬಿಕೆ ಹೊಂದಿದ್ದರು. ಹಾಗಾಗಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ವಾಣಿ ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.
೧೮೯೩ರಲ್ಲಿ ಚಿಕಾಗೋ ವಿಶ್ವ ಸಮ್ಮೇಳನದಲ್ಲಿ ವಿಶ್ವಕ್ಕೆ ಭಾರತವನ್ನು ಪರಿಚಯಿಸಿದವರು. ರವೀಂದ್ರನಾಥ್ ಠಾಗೂರ್ ಹೇಳಿದಂತೆ ಭಾರತವನ್ನು ತಿಳಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿ ಎಂದು ಹೇಳಿದ್ದರು ಅಂತಹ ಮಹಾನ್ ವ್ಯಕ್ತಿಯ ದಿನಾಚರಣೆಯನ್ನು ಇಂದು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಸಮಾಜದಲ್ಲಿ ಬದಲಾವಣೆ ಕಾಣಲು ಯುವಕರಿಂದ ಮಾತ್ರ ಸಾಧ್ಯ ಒಳ್ಳೆಯ ಗುರಿಯನ್ನು ಹಾಕಿಕೊಳ್ಳುವ ಮೂಲಕ ಮುಂದೆ ಸಾಗಿ ವಿವೇಕಾನಂದರ ಆದರ್ಶಗಳು ಹಾಗೂ ಚಿಂತನೆಗಳನ್ನು  ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಒಳಿತು ಮಾಡುವ ಮೂಲಕ ದೇಶವನ್ನು ನವನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ ಎಂದು  ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ನಮ್ಮ ದೇಶದ ಶಕಿ, ಆ ಶಕ್ತಿಯೇ ಇಡೀ ಪ್ರಪಂಚವನ್ನೇ ನಮ್ಮ ಕಡೆ ನೋಡುವಂತೆ ಮಾಡಿದೆ. ಯುವ ಶಕ್ತಿ ನಮ್ಮ ದೇಶದ ಆಸ್ತಿ ಯುವಕರು ಯಾವುದೇ ದುಶ್ಚಟಗಳಿಗೆ ಒಳಗಾಗದೆ ಒಳ್ಳೆಯ ನಡವಳಿಕೆ ರೂಪಿಸಿಕೊಂಡು ನಮ್ಮ ದೇಶಕ್ಕೆ ಆಸ್ತಿಯಾಗಬೇಕು. ಎಲ್ಲರಿಗೂ ಮಾದರಿಯಾಗುವಂತೆ ನಡೆದುಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದರ ಆದರ್ಶಗಳು ಬೆಳೆದು ಬಂದ ಹಾದಿ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವು ನಿವೇಲ್ಲರೂ ನಡೆಯಬೇಕು. ಹಾಗೇ ಒಂದು ಉತ್ತಮ ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗಿದ್ದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತು-ವಿವೇಕ, ಯುವ ಸಂವಾದದಲ್ಲಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಮನೋಸಂಕಲ್ಪವನ್ನು ದೃಢವಾಗಿ ಇಟ್ಟುಕೊಂಡಲ್ಲಿ ಯಾವುದೇ ಸಂದರ್ಭದಲ್ಲಿ ಎಷ್ಟೇ ಭಯವಿದ್ದರೂ ಕೂಡ ವಿನಯದಿಂದ ವಿವೇಕದ ಮೂಲಕ ಆನಂದವನ್ನು ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಂತಹ ಅದ್ಭುತವಾದ ಶಕ್ತಿಯೇ ವಿವೇಕಾನಂದರು ಎಂದು ತಿಳಿಸಿದರು.
ಮುಖ್ಯವಾಗಿ ವಿದ್ಯಾರ್ಥಿಗಳು ಇಂತಹ ಮಹಾನ್ ಚೇತನಾ ಮಾನವರ ಬಗ್ಗೆ ಅವರ ಅದರ್ಶಗಳ ಬಗ್ಗೆ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಒಂದು ಸಾಧನೆಯಲ್ಲಿ ನಿರ್ಧಿಷ್ಟ ಗುರಿಯನ್ನು ನಿಶ್ಚಯ ಮಾಡಿಕೊಂಡು ಮುನ್ನಡೆಯಬೇಕು ಎಂದರು.
೧೮೯೩ ಚಿಕಾಗೋ ಸಮ್ಮೇಳನದಲ್ಲಿ ಬ್ರದರ್‍ಸ್ ಆಂಡ್ ಸಿಸ್ಟರ್‍ಸ್ ಎಂಬ ಪದದಿಂದ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಸ್ವಾಮಿ ವಿವೇಕಾನಂದರು ಮಾಡಿದ್ದಾರೆ ಇಂತಹ ಅಪೂರ್ವವಾದ ವ್ಯಕ್ತಿಯ ಚರಿತ್ರೆಯನ್ನು ವಿವರವಾಗಿ ಅಧ್ಯಯನ ಮಾಡೋಣ ಎಂದು ತಿಳಿಸಿದರು.
ಕಾರ್ಯಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳ ಹುಲ್ಲಹಳ್ಳಿ, ಸರ್ಕಾರಿ ಪಿ.ಯು ಕಾಲೇಜಿನ ಪ್ರಾಂಶುಪಾಲ, ಲೋಕೇಶ್ ಹಾಗೂ ಮತ್ತಿತರರು ಸೇರಿದಂತೆ ಉಪಸ್ಥಿತರಿದ್ದರು.

Related posts

ರೈತ ವಿರೋಧಿ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹ: ಜ.26 ರಂದು ಬೃಹತ್ ಜನಗಣರಾಜ್ಯೋತ್ಸವ ಪೆರೇಡ್

Public Voice

ಸರ್ಕಾರ ಮತ್ತು ಜನರ ಕೊಂಡಿಯಾಗಿ ಜಿಲ್ಲಾ .ಪ್ರಾದೇಶಿಕ ಪತ್ರಿಕೆಗಳ ಪಾತ್ರ ಹಿರಿದು: ಸಚಿವ ಸೋಮಣ್ಣ ಹೇಳಿಕೆ

Public Voice

ಮಂಗಳೂರು ಕರಾರಸಾ ನಿಗಮದಿಂದ ಮಂತ್ರಾಲಯಕ್ಕೆ ಬಸ್ ಆರಂಭ

Public Voice