March 16, 2021
Public Voice
  • Home
  • ಮುಖ್ಯಾಂಶಗಳು
  • ಆಸೀಸ್ ವಿರುದ್ಧ ಜಯ: ಬಾರ್ಡರ್- ಗವಾಸ್ಕರ್ ಟ್ರೋಫಿಗೆ ಮುತ್ತಿಕ್ಕಿದ ಟೀಂ ಇಂಡಿಯಾ…
ಕ್ರೀಡೆ ದೇಶ ಮುಖ್ಯಾಂಶಗಳು ವಿದೇಶ

ಆಸೀಸ್ ವಿರುದ್ಧ ಜಯ: ಬಾರ್ಡರ್- ಗವಾಸ್ಕರ್ ಟ್ರೋಫಿಗೆ ಮುತ್ತಿಕ್ಕಿದ ಟೀಂ ಇಂಡಿಯಾ…

ಬ್ರಿಸ್ಬೇನ್ : ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಾರ್ಡರ್- ಗವಾಸ್ಕರ್ ಟ್ರೋಫಿಗೆ ಮುತ್ತಿಕ್ಕಿದೆ.

ನಾಲ್ಕು ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಬಾರ್ಡರ್- ಗವಾಸ್ಕರ್ ಟ್ರೋಫಿ ಗೆದ್ದು ಬೀಗಿದೆ. ಗೆಲುವಿಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ 328 ರನ್ ಗುರಿ ಪಡೆದ ಭಾರತ ತಂಡಕ್ಕೆ ಆರಂಭಿಕ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ನೆರವಾದರು. ಮೂವರು ಅರ್ಧಶತಕ ಸಿಡಿಸಿ, ಗಾಬ್ಬಾದಲ್ಲಿ ವಿಶ್ವದಾಖಲೆಯ ಜಯ ಸಾಧಿಸಲು ನೆರವಾದರು.

ಐದನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ರೋಹಿತ್ ಶರ್ಮಾರ ಮೊದಲ ವಿಕೆಟ್ ಕಳೆದುಕೊಂಡಿತು. ಕೇವಲ ಏಳು ರನ್ ಗಳಿಸಿ ರೋಹಿತ್ ಔಟಾದರು. ನಂತರ ಜೊತೆಗೂಡಿದ ಪೂಜಾರ- ಶುಭಮನ್ ಗಿಲ್ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿ ಟೀಂ ಇಂಡಿಯಾ ಗೆಲುವಿಗೆ ಭದ್ರ ಬುನಾದಿ ಹಾಕಿದರು.

ಶುಭ್ಮನ್ ಗಿಲ್ 91 ರನ್ ಗಳಿಸಿ ಲಯಾನ್ ಗೆ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು. ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಚೇತೇಶ್ವರ ಪೂಜಾರಾ 56 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ರಹಾನೆ 22 ರನ್ ಗಳಿಸಿ ಔಟಾದರು. ಆದರೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಕೀಪರ್ ರಿಷಭ್ ಪಂತ್ ಅಜೇಯ 89 ರನ್ ಗಳಿಸಿ ತಂಡವನ್ನು ಜಯ ಒದಗಿಸಿದರು.

ಸ್ಕೋರ್ ವಿವರ ಇಲ್ಲಿದೆ…

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 115.2 ಓವರ್ ಗಳಲ್ಲಿ 369, ಮಾರ್ಕಸ್ ಲಾಬುಶೇನ್ 108, ಟಿ ಪೇಯ್ನ್ 50, ಮ್ಯಾಥ್ಯೂ ವೇಡ್ 45, ಭಾರತದ ಬೌಲಿಂಗ್ : ಟಿ.ನಟರಾಜನ್ 78 /3, ಠಾಕೂರ್ 94/ 3, ವಾಷಿಂಗ್ಟನ್ ಸುಂದರ್ 89/3.

ಭಾರತ ಮೊದಲ ಇನ್ನಿಂಗ್ಸ್: 111.4 ಓವರ್ ಗಳಲ್ಲಿ 336 ರನ್, ಶಾರ್ದೂಲ್ ಠಾಕೂರ್ 67, ವಾಷಿಂಗ್ಟನ್ ಸುಂದರ್ 62, ರೋಹಿತ್ ಶರ್ಮಾ 44 ರನ್, ಆಸ್ಟ್ರೇಲಿಯಾ ಬೌಲಿಂಗ್: ಜೆ ಹೆಜಲ್ವುಡ್ 57 /5, ಮಿಚೆಲ್ ಸ್ಟಾರ್ಕ್ 88/ 2 ವಿಕೆಟ್.

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: 75.5 ಓವರ್ಗಳಲ್ಲಿ 294 , ಸ್ಮೀತ್ 55, ವಾರ್ನರ್ 48, ಭಾರತದ ಬೌಲಿಂಗ್ : ಸಿರಾಜ್ 73/5, ಶಾರ್ದೂಲ್ ಠಾಕೂರ್ 61/4,

ಭಾರತ 2ನೇ ಇನ್ನಿಂಗ್ಸ್: 97 ಓವರ್ಗಳಲ್ಲಿ 329 ಶುಬ್ಮನ್ ಗಿಲ್ 91, ಪೂಜಾರ 56, ಪಂತ್ ಆಸ್ಟ್ರೇಲಿಯಾ ಬೌಲಿಂಗ್: ಕಮೀನ್ಸ್ 4, ನಾಥನ್ ಲಿಯಾನ್ 2 .

Related posts

ಲೀಸ್ ನೀಡಿದ್ದ ಭೂಮಿ ವಾಪಸ್ ಪಡೆದು ಅರಣ್ಯ ಇಲಾಖೆಗೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ..

Public Voice

ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಅರವಿಂದ ಲಿಂಬಾವಳಿ

Public Voice

ಕಾಲಮಿತಿಯೊಳಗೆ ಸದಸ್ಯತ್ವ ಮಾಡುವಂತೆ ಶಿವಮೊಗ್ಗ ಪರಿವಾರದ ಅಧ್ಯಕ್ಷರಾದ ಕೆ.ಎಸ್ ಶಶಿ ಕರೆ

Public Voice