March 16, 2021
Public Voice
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ ಸಿನಿಮಾ

‘ಪೊಗರು’ ರಿಲೀಸ್: ಭರ್ಜರಿ ಪ್ರದರ್ಶನ….

ಶಿವಮೊಗ್ಗ,ಫೆ.19: ಆಕ್ಷನ್‍ಪ್ರಿನ್ಸ್ ಧ್ರುವಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಇಂದು ಬಿಡುಗಡೆಯಾಗಿದ್ದು, ಭರ್ಜರಿ ಯಶಸ್ಸು ಕಂಡಿದೆ. ಮೊದಲ ದಿನವೇ ಬೆಳಿಗ್ಗೆ 7 ಗಂಟೆಗೆ ಪ್ರದರ್ಶನ ಆರಂಭವಾಗಿದೆ.
ಬರೋಬ್ಬರಿ 3 ವರ್ಷಗಳ ನಂತರ ಧ್ರುವಸರ್ಜಾ ಅಭಿನಯದ ಸಿನಿಮಾ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಕೊರೋನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿತ್ತು.
ಇಂದು ಪೊಗರು ಬಿಡುಗಡೆಯಾಗುವುದರೊಂದಿಗೆ ಚಿತ್ರಮಂದಿರಗಳಿಗೆ ಹೊಸಕಳೆ ಬಂದಿದೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಸಿನಿರಸಿಕರು, ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬೆಳಿಗ್ಗೆ 7 ಗಂಟೆಗೆ ವಿಶೇಷ ಪ್ರದರ್ಶನ ಶುರುವಾಗಿದ್ದು, ನಿರಂತರ ಪ್ರದರ್ಶನ ಮುಂದುವರೆದಿದೆ.
ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಪೊಗರು ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರದ ಬಳಿ ಹಬ್ಬದ ವಾತಾವರಣ ಕಂಡುಬಂದಿದೆ. ಧ್ರುವಸರ್ಜಾ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬಹುದಿನಗಳ ನಂತರ ಸಿನಿಮಾ ಮಂದಿರದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದ್ದು, ಧ್ರುವಸರ್ಜಾ ಅಭಿಮಾನಿಗಳ ಸಂಭ್ರಮವಂತು ಮುಗಿಲು ಮುಟ್ಟಿದೆ.

Related posts

ರಾಮಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂ. ದೇಣಿಗೆ

Public Voice

ಉಚಿತ ಪಡಿತರ ವಿತರಣೆ: ಹಣ ಪಡೆಯುವ ಪ್ರಸ್ತಾವನೆ ಇಲ್ಲ …..

Public Voice

ಪಡಿತರ ಚೀಟಿದಾರರಿಗೆ ಒಂದು ಗುಡ್ ನ್ಯೂಸ್ ಒಂದು ಬ್ಯಾಡ್ ನ್ಯೂಸ್…

Public Voice