March 16, 2021
Public Voice
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಸಿನಿಮಾ

ನಟ ಜಗ್ಗೇಶ್ ಗೆ ‘ಡಿ ಬಾಸ್’  ಅಭಿಮಾನಿಗಳಿಂದ ಮುತ್ತಿಗೆ, ತರಾಟೆ…

ಮೈಸೂರು:  ನಟ ದರ್ಶನ್ ಅಭಿಮಾನಿಗಳನ್ನ ನಿಂದಿಸಿದ್ದಾರೆಂದು ಆರೋಪ ಹಿನ್ನಲೆ ನಟ ಜಗ್ಗೇಶ್ ಗೆ ನಟ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ನಮ್ಮತ್ರ  ಇರೋರೆಲ್ಲಾ ಹಾರ್ಡ್ ವರ್ಕ್ ಮಾಡೋರು. ದರ್ಶನ್ ತರ ತಲೆ ಮಾಂಸ ಕಳಿಸಿ, ನೂರು ಕುರಿ ಕಳಿಸಿ ಅನ್ನೋರು ಯಾರು ಇಲ್ಲ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.  ಈ ಬಗ್ಗೆ ನಟ ದರ್ಶನ್ ಫ್ಯಾನ್ಸ್ ಗರಂ ಆಗಿದ್ದು ಇಂದು ಮೈಸೂರು ಜಿಲ್ಲೆ ಬನ್ನೂರಿನ ಅತ್ತಳ್ಳಿ ಬಳಿ ಶೂಟಿಂಗ್ ಸೆಟ್ ಗೆ ಮುತ್ತಿಗೆ ಹಾಕಿ ನಟ ಜಗ್ಗೇಶ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿನಿಮಾವೊಂದರ ಶೂಟಿಂಗ್‌ ನಲ್ಲಿ ಇದ್ದ ಜಗ್ಗೇಶ್‌ ಅವರನ್ನು ಭೇಟಿಯಾದ ದರ್ಶನ್‌ ಅವರ ಅಭಿಮಾನಿಗಳು ಜಗ್ಗೇಶ್‌ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗ್ಗೇಶ್‌ರನ್ನ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ದರ್ಶನ್ ಅಭಿಮಾನಿ ನಾಗರಾಜ್ ಸೇರಿದಂತೆ ಹಲವರು ನಟ ಜಗ್ಗೇಶ್ ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ನಾನು ಯಾರನ್ನೂ ನಿಂದಿಸಿಲ್ಲ. ಯಾರೋ ನನ್ನ ಹಾಗೆಯೇ ಮಾತನಾಡಿದ್ದಾರೆ. ನನ್ನ ಮತ್ತು ದರ್ಶನ್ ನಡುವೆ ತಂದಾಕುವ ಕೆಲಸ ಮಾಡಿದ್ದಾರೆ. ನಾನು ಯಾರನ್ನೂ ಬೈದಿಲ್ಲ, ನಿಂದನೆ ಮಾಡಿಲ್ಲ. ನನ್ನ ವಾಯ್ಸ್‌ ನಲ್ಲಿ ಮಾತನಾಡಿದ್ದಾರೆಂದು ದರ್ಶನ್ ಅಭಿಮಾನಿಗಳಿಗೆ ಸಮಜಾಯಿಷಿ ಕೊಟ್ಟರು.

ಆದರೆ ಇದಕ್ಕೆ ಪಟ್ಟು ಬಿಡದ ನಟ ದರ್ಶನ್ ಫ್ಯಾನ್ಸ್ ನೀವೇ ನಿಂದನೆ ಮಾಡಿರೋದು ಎಂದು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

Related posts

ಸಾಹಿತ್ಯ ಹುಣ್ಣಿಮೆಗೆ ೧೮೫ ನೆಯ ತಿಂಗಳ ಸಂಭ್ರಮ:ಮಾರ್ಚ್ ೩ರಂದು ಅಡಿಗರ ಕಾವ್ಯ ಸಂಭ್ರಮ.

Public Voice

 ಅಪಘಾತದಲ್ಲಿ ಗಾಯಗೊಂಡು ಗುಣಮುಖಳಾದ ವಿದ್ಯಾರ್ಥಿನಿ ಮನೆಗೆ ಸಚಿವ ಸುರೇಶ್ ಕುಮಾರ್ ಭೇಟಿ: ಶುಭ ಹಾರೈಕೆ…

Public Voice

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಂದು ನಿಷೇಧಾಜ್ಞೆ ಜಾರಿ

Public Voice