ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೊಂದು ರಾಸಲೀಲೆ ಸಿಡಿ ಬಾಂಬ್ ಸ್ಪೋಟಗೊಂಡಿದೆ. ಹೌದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋವನ್ನು ಬಹಿರಂಗವಾಗಿದ್ದು, ನಾಗರಿಕ ಹಕ್ಕು ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಸಿಡಿ ರಿಲೀಸ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಗೆ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಯುವತಿಯೊಬ್ಬಳು ಡ್ರೋನ್ ಕ್ಯಾಮರಾಗಳ ಮೂಲಕ ಕರ್ನಾಟಕದ ಡ್ಯಾಂಗಳನ್ನು ಚಿತ್ರೀಕರಣ ಮಾಡಬೇಕು. ಅದಕ್ಕೆ ಅವಕಾಶ ಕೊಡಿ ಎಂದು ರಮೇಶ್ ಜಾರಕಿಹೊಳಿ ಬಳಿ ಕೇಳಿಕೊಂಡು ಬಂದಿದ್ದಳು. ಆಕೆಯನ್ನು ಪುಸಲಾಯಿಸಿ ಕೆಪಿಟಿಸಿಎಲ್ನಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾರೆ . ಬಳಿಕ ಉದ್ಯೋಗ ನೀಡದೆ ವಂಚಿಸಿದ್ದಾರೆ. ಬಳಿಕ ತನ್ನ ಕಾಮದಾಟದ ವಿಡಿಯೋ ಯುವತಿ ಬಳಿ ಇರುವುದು ಗೊತ್ತಾಗೆ ಆಕೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಮಾತನಾಡಿರುವ ದಿನೇಶ್ ಕಲ್ಲಳ್ಳಿ, ಸಂತ್ರಸ್ತೆಯ ಕುಟುಂಬಸ್ಥರು ನನಗೆ ಅಪ್ರೋಚ್ ಮಾಡಿದ್ದು ಈ ಹಿನ್ನೆಲೆಯಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಇನ್ನು ಸಂತ್ರಸ್ತೆ ಮಹಿಳೆ ನನ್ನನ್ನ ಸಂಪರ್ಕಿಸಿ ಆದ ನೋವನ್ನ ನನ್ನ ಬಳಿ ತೋಡಿಕೊಂಡಿದ್ದಾರೆ. ಹೀಗಾಗಿ ಅವರ ಪರ ನಾನು ದೂರು ನೀಡುತ್ತಿದ್ದೇನೆ. ಇನ್ನು ಸಂತ್ರಸ್ತ ಮಹಿಳೆಯ ಹೆಸರನ್ನ ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
