ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಕುಸ್ಕೂರು ಗ್ರಾಮದ ವಾಸಿಗಳಾದ ವೆಂಕಟೇಶ್ನಾಯ್ಕ ಮತ್ತು ಚಿನ್ನಯ್ಯನಾಯ್ಕ ಎಂಬುವವರು ಶಾರದ ಸೀತಾಬಾಯಿಯವರಿಗೆ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಕಾರಣ ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ.
ಮಾ. 02 ರಂದು ಶಿವಮೊಗ್ಗ 2ನೇ ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಅಂಬಣ್ಣರವರು ಆರೋಪಿಗಳಿಗೆ ಕಲಂ: 498(ಎ)ಐಪಿಸಿ ಅಪರಾಧಕ್ಕೆ ತಲಾ ಒಂದು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ತಲಾ ರೂ. 1,000/-ಗಳ ದಂಡವನ್ನು ವಿಧಿಸಿ ಕಲಂ:354 ಐಪಿಸಿ ಅಪರಾಧಕ್ಕೆ ತಲಾ ಒಂದು ವರ್ಷದ ಸಾದಾ ಸಜೆ ಶಿಕ್ಷೆ, ಕಲಂ:324 ಐಪಿಸಿ ಅಪರಾಧಕ್ಕೆ ತಲಾ ಆರು ತಿಂಗಳು ಸಾದಾ ಸಜೆ ಶಿಕ್ಷೆ ಹಾಗೂ ತಲಾ ರೂ. 500/- ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.
ನೊಂದ ಮಹಿಳೆ ಶಾರದಾ ಸೀತಾಬಾಯಿರವರಿಗೆ ರೂ. 10,000/- ಹಣವನ್ನು ಪರಿಹಾರವಾಗಿ ನೀಡತಕ್ಕದ್ದೆಂದು ಆದೇಶಿಸಿ ತೀರ್ಪು ನೀಡಿರುತ್ತಾರೆ.
ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಜಿ.ಕೆ. ಕಿರಣ್ ಕುಮಾರ್ ಇವರು ವಾದ ಮಂಡಿಸಿದ್ದರು.
