March 16, 2021
Public Voice
ಕ್ರೀಡೆ ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಅಂತಿಮ ಟೆಸ್ಟ್: ಆಂಗ್ಲಪಡೆ ಆಲ್ ಔಟ್: ಭಾರತಕ್ಕೆ ಆರಂಭಿಕ ಆಘಾತ..

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ಮಂಕಾಗಿದ್ದು 205 ರನ್ ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಜಾನಿ ಬೇರ್ಸ್ಟೋವ್ 28, ಬೆನ್ ಸ್ಟೋಕ್ಸ್ 55, ಒಲಿ ಪೊಪೆ 29, ಡಾನ್ ಲಾರೆನ್ಸ್ 46 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಅಕ್ಷರ್ ಪಟೇಲ್ 4, ಅಶ್ವಿನ್ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.

ಅಕ್ಷರ್ ಪಟೇಲ್-ಅಶ್ವಿನ್ ಸ್ಪಿನ್ ಮೋಡಿ

ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ಜೋಡಿ ಮತ್ತೊಮ್ಮೆ ಆಘಾತ ನೀಡಿತು. ಎಚ್ಚರಿಕೆ ಆರಂಭ ಪಡೆಯಲು ಯತ್ನಿಸುತ್ತಿದ್ದ ಜಾಕ್ ಕ್ರೌಲಿ (9) ಹಾಗೂ ಡೊಮಿನಿಕ್ ಸಿಬ್ಲೆ (2) ಜೋಡಿಗೆ ಆರಂಭದಲ್ಲೇ ಅಕ್ಷರ್ ಪಟೇಲ್ ಕಡಿವಾಣ ಹೇರಿದರು.

ಇನಿಂಗ್ಸ್‌ನ 6 ಓವರ್‌ನ 2ನೇ ಎಸೆತದಲ್ಲಿ ಸಿಬ್ಲೆ ಅವರನ್ನು ಬೌಲ್ಡ್ ಮಾಡುವ ಮೂಲಕ ಅಕ್ಷರ್ ಪಟೇಲ್ ಇಂಗ್ಲೆಂಡ್ ಕುಸಿತಕ್ಕೆ ಮುನ್ನುಡಿ ಬರೆದರು. ಇದರ ಬೆನ್ನಲ್ಲೇ ಜಾಕ್ ಕ್ರೌಲಿ ಕೂಡ ಪಟೇಲ್‌ಗೆ ವಿಕೆಟ್ ನೀಡಿದರು 15 ರನ್ ಪೇರಿಸುವಷ್ಟರಲ್ಲಿ ಇಂಗ್ಲೆಂಡ್ ಆರಂಭಿಕರನ್ನು ಕಳೆದುಕೊಂಡಿತು. ನಾಯಕ ಜೋ ರೂಟ್ (5) ಕೂಡ ಮೊಹಮದ್ ಸಿರಾಜ್ ಎಸೆತದಲ್ಲಿ ಎಲ್‌ಬಿಯಾದರು. ಕೇವಲ 30ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಆರಂಭಿಕ ಆಘಾತದಿಂದ ತತ್ತರಿಸಿತು. ಜಾನಿ ಬೇರ್‌ಸ್ಟೋ (28), ಬೆನ್ ಸ್ಟೋಕ್ಸ್ ಹಾಗೂ ಒಲಿ ಪೊಪ್ (29) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಕೆಲಕಾಲ ಆಸರೆಯಾದರು. ಉಳಿದಂತೆ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಜೋಡಿ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರಿಸಿತು.

ಭಾರತಕ್ಕೆ ಆರಂಭಿಕ ಆಘಾತ…

ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾಗೆ ಮೊದಲ ಆಘಾತ ಎದುರಾಗಿದ್ದು ಶೂನ್ಯಕ್ಕೆ ಶುಭ್ಮನ್ ಗಿಲ್ ಔಟಾದರು. ನಂತರ ಜೊತೆಯಾದ ರೋಹಿತ್ ಶರ್ಮಾ ಅಜೇಯ 8 ಮತ್ತು ಚೇತೇಶ್ವರ ಪೂಜಾರಾ ಅಜೇಯ 15 ರನ್ ಬಾರಿಸಿದ್ದಾರೆ. ಇಬ್ಬರು ಆಟಗಾರರು ನಾಳೆ ಎರಡನೇ ದಿನದಾಟವನ್ನು ಆರಂಭಿಸಲಿದ್ದಾರೆ.

ಇಂಗ್ಲೆಂಡ್ ಮತ್ತು ಭಾರತ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

Related posts

ಮೀಸಲಾತಿ ಬಗ್ಗೆ ಸಂವಿಧಾನದ ಚೌಕಟ್ಟಿನಲ್ಲಿ ಚರ್ಚಿಸಿ ನಿರ್ಧಾರ-ಸಿಎಂ ಬಿಎಸ್ ವೈ

Public Voice

ಸಿಎಂ ಬಿಎಸ್ ವೈ ಗೆ ಸಿಡಿ ತೋರಿಸಿ ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಿರುವ ಶಾಸಕರ ಮೇಲೆ ಕ್ರಮಕ್ಕೆ ಕೆಪಿಸಿಸಿ ಆಗ್ರಹ …

Public Voice

ಕೇಂದ್ರದ ಬಜೆಟ್ ಕೇವಲ ಕಾಗದದ ಬಜೆಟ್-ಹೆಚ್.ಎಸ್.ಸುಂದರೇಶ್ ಟೀಕೆ

Public Voice