ಶಿವಮೊಗ್ಗ : ಮೈಸೂರಿನಲ್ಲಿ ನಡೆದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯ 5ರಿಂದ 7ವರ್ಷದ ಸ್ವಾಡ್ ಸ್ಕೇಟಿಂಗ್ ವಿಭಾಗದಲ್ಲಿ ಶಿವಮೊಗ್ಗ ಎಪಿಎಂಸಿ ಯಾರ್ಡ್ನ ಹರ್ಷಿತ (ಸಹ್ಯಾದ್ರಿ) ರೋಲರ್ ಸ್ಕೇಟಿಂಗ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿನಿ ನಿಲ ಸಂಪತ್ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾಳೆ.
ಕೋಚ್ ಶೇಖರ್ ಬಾಬು ಹಾಗೂ ಕ್ಲಬ್ಬಿನ ಎಲ್ಲಾ ತರಬೇತುದಾರರು ಸದಸ್ಯರು ಅಭಿನಂದಿಸಿದ್ದು, ಈ ಪ್ರತಿಭಾನ್ವಿತೆಯು ಸಂಪತ್ ಮತ್ತು ಶುಭ ದಂಪತಿಗಳ ಪುತ್ರಿ.
