March 24, 2021
Public Voice
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೋವಿಡ್ ಲಸಿಕೆ ಪಡೆಯಲು ಎಲ್ಲರೂ ಧೈರ್ಯ ಮಾಡಿ- ದಲೈ ಲಾಮಾ ಕರೆ…

 

ನವದೆಹಲಿ: ಕೋವಿಡ್ ಲಸಿಕೆ ಪಡೆಯಲು ಎಲ್ಲರೂ ಧೈರ್ಯ ಮಾಡಬೇಕು ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಕರೆ ನೀಡಿದರು.

ಭಾರತದಲ್ಲಿ ಮಾರ್ಚ್ 1ರಿಂದ ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಿದ್ದು, ಈ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ನಡುವೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿನ ಆಸ್ಪತ್ರೆಯೊಂದರಲ್ಲಿ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡರು.

ಬಳಿಕ ಮಾತನಾಡಿದ ಅವರು, ಜನರು ಅಧಿಕ ಸಂಖ್ಯೆಯಲ್ಲಿ ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು ಹಾಗೂ ಲಸಿಕೆ ತೆಗೆದುಕೊಳ್ಳುವುದು ಪ್ರಸ್ತುತ ಆರೋಗ್ಯಕ್ಕೆ ಬಹು ಮುಖ್ಯವಾಗಿದೆ. ಕೊರೊನಾದಂಥ ಗಂಭೀರ ಸೋಂಕನ್ನು ತಡೆಯಲು ಈ ಲಸಿಕೆ ತುಂಬಾ ಪ್ರಯೋಜನಕಾರಿ ಎಂದರು.

ವೈದ್ಯರು ಹಾಗೂ ನನ್ನ ಸ್ನೇಹಿತರು ಲಸಿಕೆ ಪಡೆದುಕೊಳ್ಳಲು ನನಗೆ ಸಲಹೆ ನೀಡಿದರು. ಈ ಲಸಿಕೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ನಾನು ಕೂಡ ಲಸಿಕೆ ಪಡೆದುಕೊಂಡೆ. ಅಧಿಕ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಪಡೆಯಲು ಎಲ್ಲರೂ ಧೈರ್ಯ ಮಾಡಿ ಎಂದು ಕರೆ ನೀಡಿದರು.

ದಲೈ ಲಾಮಾ ಅವರು ಲಸಿಕೆ ಪಡೆದುಕೊಂಡ ನಂತರ ಭಾರತೀಯ ಸರ್ಕಾರ ಹಾಗೂ ರಾಜ್ಯ ಔಷಧಾಲಯಕ್ಕೆ ದಲೈ ಲಾಮಾ ಕಚೇರಿ ಧನ್ಯವಾದ ಸಲ್ಲಿಸಿದೆ.

 

Related posts

ಪಿಎಫ್ ಐ ಗುರಿಯಾಗಿಸಿಕೊಂಡು ಯುಪಿ ಸರ್ಕಾರದಿಂದ ದಮನಕಾರಿ ನೀತಿ ಎಂದು ಆರೋಪಿಸಿ ಪ್ರತಿಭಟನೆ…

Public Voice

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದಿಂದ ಅಭಿನಂದನೆ: ಸ್ವಾಸ್ಥ್ಯ ಬದುಕಿಗೆ ಯೋಗ ಅನಿವಾರ್ಯ-ಸಿ.ವಿ ರುದ್ರಾರಾಧ್ಯ

Public Voice

ಇಂಡೋ-ಆಸೀಸ್ 3ನೇ ಟೆಸ್ಟ್ ಪಂದ್ಯ: ಡ್ರಾನಲ್ಲಿ ಅಂತ್ಯ…

Public Voice