March 15, 2021
Public Voice
  • Home
  • ಮುಖ್ಯಾಂಶಗಳು
  • ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ದಿನೇಶ್ ಕಲ್ಲಹಳ್ಳಿ ‘ಯು ಟರ್ನ್’…..
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ದಿನೇಶ್ ಕಲ್ಲಹಳ್ಳಿ ‘ಯು ಟರ್ನ್’…..

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಾರಿ ಸುದ್ದಿಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಕೇಸ್​ ಗೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ದಿನೇಶ್ ಕಲ್ಲಹಳ್ಳಿ ದೂರನ್ನ ವಾಪಸ್ ಪಡೆದಿದ್ದಾರೆ.

ಹೌದು.. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ದ ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದಿದ್ದಾರೆ.

ಮಾರ್ಚ್ 2 ರಂದು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ, (ಭಾನುವಾರ) ದೂರನ್ನು ತಮ್ಮ ವಕೀಲರ ಮೂಲಕ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಸಲೀಲೆ ಸಿಡಿ ಬಿಡುಗಡೆ ನಂತರ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಇದೀಗ ದಿನೇಶ್ ಕಲ್ಲಹಳ್ಳಿ ಬಹುದೊಡ್ಡ ಯೂ-ಟರ್ನ್ ಹೊಡೆದಿದ್ದು, ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ತಮ್ಮ ವಕೀಲರ ಮುಖಾಂತರ ಪೊಲೀಸ್ ಠಾಣೆಗೆ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ರವಾನೆ ಮಾಡಿದ್ದಾರೆ.

ದಿನೇಶ್ ಕಲ್ಲಹಳ್ಳಿ ಏಕೆ ಈ ನಿರ್ಧಾರ ಕೈಗೊಂಡಿದ್ದಾರೆ? ಏನಾದ್ರೂ ಬೆದರಿಕೆ ಇದ್ಯಾ..? ಎನ್ನುವ ಹಲವು ಪ್ರಶ್ನೆಗಳು ಮೂಡಿವೆ. ಇನ್ನೂ ಈ ಪ್ರಕರಣದಲ್ಲಿ ಸಿ.ಡಿ.ಯಲ್ಲಿರುವ ಯುವತಿಗಾಗಿ ಪೊಲೀಸರು ಎಲ್ಲಾ ಕಡೆ ಜಾಲಾಡುತ್ತಿದ್ದಾರೆ. ಆದ್ರೆ, ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

Related posts

ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಆರಂಭ: ಸಂಭ್ರಮದಿಂದ ಶಾಲೆಗೆ ಆಗಮಿಸಿದ ಮಕ್ಕಳು…

Public Voice

ಡಿ.26ರಂದು ಜಿಲ್ಲಾ ವಾಣಿಜ್ಯ ಮತು ್ತಕೈಗಾರಿಕಾ ಸಂಘದ ವತಿಯಿಂದ ಸಂಸ್ಥಾಪಕರ ದಿನಾಚರಣೆ

Public Voice

`ಈಶ್ವರವನ’ದಲ್ಲಿ ಮಾ.11 ರಂದು ಮಹಾ ಶಿವರಾತ್ರಿ ಆಚರಣೆ…

Public Voice