March 24, 2021
Public Voice
  • Home
  • ಮುಖ್ಯಾಂಶಗಳು
  • ದೇವಾಂಗ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಮಾ.10ರಂದು ಬೃಹತ್ ಉರುಳು ಸೇವೆ
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ದೇವಾಂಗ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಮಾ.10ರಂದು ಬೃಹತ್ ಉರುಳು ಸೇವೆ

ಶಿವಮೊಗ್ಗ, ಮಾ.08: ದೇವಾಂಗ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಮಾ.10ರಂದು ಬೃಹತ್ ಉರುಳು ಸೇವೆ ಆಯೋಜಿಸಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಸೂರು ಬಸವರಾಜ್ ಇಂದಿಲ್ಲಿ ತಿಳಿಸಿದರು.
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,  ಕರ್ನಾಟಕ ರಾಜ್ಯದಲ್ಲಿ ಅತ್ಯಂತ ತಳಮಟ್ಟದಲ್ಲಿ ಬದುಕುತ್ತಿರುವ ದೇವಾಂಗ ಜನಾಂಗವನ್ನು   ಪರಿಶಿಷ್ಟ ಜಾತಿಗೆ ಸೇರಿಸಲು ಸಮಿತಿ ನೀಡಿದ್ದ ಹದಿನೈದು ದಿನದ ಗಡುವು ನೀಡಿದ್ದ ಸಮಾಜದ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಿದೆ ಎಂದರು.
ಮೊದಲ ಹಂತವಾಗಿ ಸಮಿತಿ ಶಿವಮೊಗ್ಗ ಜಿಲ್ಲೆಯಿಂದ ಹೋರಾಟ ಆರಂಭಿಸಿದ್ದು, ಸಮಿತಿಯ ರಾಜ್ಯ ಸಂಚಾಲಕ ಈಸೂರು ಬಸವರಾಜ್ ನೇತೃತ್ವದಲ್ಲಿ ಬರುವ ಮಾ.10ರ ಬುಧವಾರ ಬೆಳಿಗ್ಗೆ ಹನ್ನೊಂದರಿಂದ ಸಮಾಜದ ನೂರಾರು ಮಹಿಳೆಯರು ಮತ್ತು ಪುರುಷರಿಂದ ಬೃಹತ್ ಉರುಳು ಸೇವೆ ಪ್ರತಿಭಟನೆ ಆಯೋಜಿಸಲಾಗಿದೆ.
ಸಮಾಜವು  ದೇವಾಂಗ, ಪಡಸಾಲಿ, ಪದ್ಮಸಾಲಿ, ಕುರುವಿನಶೆಟ್ಟಿ, ತೊಗಟವೀರ, ಸೊಕ್ಕಳಸಾಲಿ ಪಟಗಾರ, ದೇವಾಂಗ ಕೋಷ್ಟಿ ಸೇರಿದಂತೆ ಇರುವ ಈ ಸಮಾಜದ ಶೇ.99ರಷ್ಟು ಜನತೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ರಂಗಗಳಲ್ಲಿ ಹಿಂದುಳಿದಿದ್ದು, ತಳಮಟ್ಟದ ಸಮುದಾಯವಾಗಿದ್ದು, . ಈ ಸಮುದಾಯದ ಆರ್ಥಿಕ ಹಾಗೂ ಶೈಕ್ಷಣಿಕ ಮಟ್ಟದ ಬಗ್ಗೆ  ತಜ್ಞರಿಂದ ಸಮಗ್ರವಾಗಿ  ಪರಿಶೀಲನೆ ನಡೆಸಿ ಆ ವರದಿಯನುಸಾರ ಮೀಸಲಾತಿಯನ್ನು ಘೋಷಿಸಬೇಕೆಂದು ಅಖಿಲ ಕರ್ನಾಟಕ ದೇವಾಂಗ ಮೀಸಲಾತಿ ಹೋರಾಟ ಸಮಿತಿ ಮುಖ್ಯಮಂತ್ರಿಗಳಿಗೆ ವಿನಂತಿಸಿತ್ತು ಎಂದು ಹೇಳಿದರು.
ದೇವಾಂಗ ಜನಾಂಗವು ಹೆಸರಿಗೆ ಮಾತ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ. ಇದು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅತಿ ಹೆಚ್ಚು ವಂಚಿತವಾಗಿರುವ ಸಮಾಜದ ಕಟ್ಟ ಕಡೆಯ ಜನಾಂಗವಾಗಿದೆ. ರೈತರು ಮತ್ತು ನೇಕಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ರೈತ ಊಟ ನೀಡಿದರೆ ನೇಕಾರ ಬಟ್ಟೆ ಕೊಟ್ಟು ಎಲ್ಲರ ಮಾನ ಕಾಪಾಡಿದ್ದಾನೆ. ಈಗಿರುವಾಗ ರೈತರಷ್ಟು ಕನಿಷ್ಠ ಅವಕಾಶಗಳು ಸಿಗುತ್ತಿಲ್ಲ ಎಂಬುದನ್ನು ಗಮನಿಸಬೇಕಾಗಿದೆ ಎಂದಿದ್ದಾರೆ.
ಇಡೀ ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರನ್ನು ಹೊಂದಿರುವ ಈ ಜನಾಂಗದಲ್ಲಿ ಆರ್ಥಿಕವಾಗಿ ಒಂದಿಷ್ಟು ಸಬಲರು ಎನ್ನುವ ಸಂಖ್ಯೆ ಬೆರಳಿಕೆಯಷ್ಟಿದೆ. ಆರ್ಥಿಕ ಸೌಲಭ್ಯಗಳು ಹಾಗೂ ಶೈಕ್ಷಣಿಕ ಅನುಕೂಲತೆಗಳಿಗೆ ಒಂದು ದಿನವೂ ಬೇಡದ ನಮ್ಮ ಜನಾಂಗದ ಸದ್ಯದ ಪರಿಸ್ಥಿತಿಯನ್ನು ತಾವುಗಳು ಗಂಭೀರವಾಗಿ ಗಮನಿಸುವ ಮೂಲಕ ತಜ್ಞರ ಸಮಿತಿ ರಚಿಸಿ ಇಡೀ ರಾಜ್ಯದಲ್ಲಿರುವ ದೇವಾಂಗ ಸಮಾಜದ ಸಮೀಕ್ಷೆ ನಡೆಸಿ ಅದರ ವರದಿಯನುಸಾರ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇರೆಂಬುದು ನಮ್ಮ ಆಗ್ರಹವಾಗಿದೆ ಎಂದು ಸಮಾಜದ ಪ್ರಮುಖರಾದ ಹೊಸದುರ್ಗದ ಡಿ.ಟಿ.ಚಂದ್ರಶೇಖರ್, ಆರುಂಡಿಯ ಕೆ. ಉಮೇಶ್, ಶಂಕರಮ್ಮ ಹಾಗೂ ವಿರೇಶ್ ಚಿತ್ತರಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭು ಕಲ್ಮನೆ, ಶರಣ್ ರಾಜ್, ತ್ರಿವೇಣಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖರು ಉಪಸ್ಥಿತರಿದ್ದರು.

Related posts

ನಾಡಗೀತೆಯಲ್ಲಿ ಮಹಿಳೆಯ ಹೆಸರೇ ಇಲ್ಲ ಎಂಬ ಆರೋಪ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಧ್ವನಿ..

Public Voice

ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನ….

Public Voice

ಫೆ. 6ರಂದು ಉದ್ಯೋಗ ಮಾರ್ಗದರ್ಶನ ಶಿಬಿರ”

Public Voice