March 16, 2021
Public Voice
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ವಿಜಯ್ ಹಜಾರೆ ಟ್ರೋಫಿ: ಸೆಮೀಸ್‌ ಗೆ ಕರ್ನಾಟಕ ತಂಡ….

 

ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ 80 ರನ್‌ಗಳಿಂದ ಕೇರಳ ತಂಡವನ್ನು ಮಣಿಸಿ ಸೆಮಿಓಫೈನಲ್ ಗೆ ಲಗ್ಗೆ ಇಟ್ಟಿದೆ.

ಪಾಲಂನ ಏರ್ ಫೋರ್ಸ್ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಕೇರಳಾ ವಿರುದ್ದ ಜಯ ಸಾಧಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.  ಆರಂಭಿಕರಾದ ನಾಯಕ ಆರ್.ಸಮರ್ಥ್ (192ರನ್, 158 ಎಸೆತ, 22 ಬೌಂಡರಿ, 3 ಸಿಕ್ಸರ್) ಹಾಗೂ ದೇವದತ್ ಪಡಿಕಲ್ (101ರನ್, 119 ಎಸೆತ, 10 ಬೌಂಡರಿ, 2 ಸಿಕ್ಸರ್) ಜೋಡಿಯ ಭರ್ಜರಿ ನಿರ್ವಹಣೆ ಹಾಗೂ ವೇಗಿ ರೋಹಿತ್ ಮೋರೆ (36 ಕ್ಕೆ 5) ಮಾರಕ ದಾಳಿ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ಸಮರ್ಥ್ ಹಾಗೂ ಪಡಿಕಲ್ ಜೋಡಿ ಮೊದಲ ವಿಕೆಟ್‌ಗೆ 249 ರನ್ ಬಾರಿಸಿದರು. ಈ ಇಬ್ಬರ  ಜತೆಯಾಟದ ಫಲವಾಗಿ ಕರ್ನಾಟಕ ತಂಡ 50 ಓವರ್ ಗಳಲ್ಲಿ 338 ರನ್ ಗಳಿಸಿತು. ಗುರಿ ಬೆನ್ನತ್ತಿದ   ಕೇರಳ ತಂಡ ವತ್ಸಲ್ (92ರನ್, 96 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಮೊಹಮದ್ ಅಜರುದ್ದೀನ್ (52ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 43.4 ಓವರ್‌ಗಳಲ್ಲಿ 258 ರನ್‌ಗಳಿಗೆ  ಸರ್ವಪತನವಾಯಿತು.

ಸಂಕ್ಷಿಪ್ತ ಸ್ಕೋರ್…

 

ಕರ್ನಾಟಕ : 3 ವಿಕೆಟ್‌ಗೆ 338 (ಸಮರ್ಥ್.ಆರ್ 192, ದೇವದತ್ ಪಡಿಕಲ್ 101, ಮನೀಷ್ ಪಾಂಡೆ 34*, ಬಸಿಲ್ ಎನ್‌ಪಿ 57ಕ್ಕೆ 3), ಕೇರಳ: 43.4 ಓವರ್‌ಗಳಲ್ಲಿ 258 (ರಾಬಿನ್ ಉತ್ತಪ್ಪ 2, ವಿಷ್ಣು ವಿನೋದ್ 28, ವತ್ಸಲ್ 92, ಮೊಹಮದ್ ಅಜರುದ್ದೀನ್ 52, ಸಚಿನ್ ಬೇಬಿ 27, ರೋಹಿತ್ ಮೋರೆ 36 ಕ್ಕೆ 5, ಶ್ರೇಯಸ್ ಗೋಪಾಲ್ 64ಕ್ಕೆ 2, ಕೆ.ಗೌತಮ್ 73ಕ್ಕೆ 2).

Related posts

ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ….

Public Voice

ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಫೆ.20ರಿಂದ 3 ದಿನಗಳ ಕಾಲ ವಿಶೇಷ ಕಾರ್ಯಗಾರ

Public Voice

ಕಂಟೇನರ್ ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ದುರ್ಮರಣ….

Public Voice