March 25, 2021
Public Voice
  • Home
  • ಜಿಲ್ಲೆ
  • ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ವಿವರ/  ಮಾ.11 ರಂದು ಮಾಂಸ ಮಾರಾಟ ನಿಷೇಧ/ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ/ಕಾನೂನು ಬಾಹಿರವಾಗಿ ಖಾಸಗಿ ವಾಹನವನ್ನು ಬಾಡಿಗೆಗೆ ಓಡಿಸುವವರಿಗೆ ಕಾನೂನು ಕ್ರಮ /
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ವಿವರ/  ಮಾ.11 ರಂದು ಮಾಂಸ ಮಾರಾಟ ನಿಷೇಧ/ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ/ಕಾನೂನು ಬಾಹಿರವಾಗಿ ಖಾಸಗಿ ವಾಹನವನ್ನು ಬಾಡಿಗೆಗೆ ಓಡಿಸುವವರಿಗೆ ಕಾನೂನು ಕ್ರಮ /

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ವಿವರ
ಶಿವಮೊಗ್ಗ, : ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರವರು ಮಾ.10 ರಿಂದ 14 ರವರೆಗೆ ಶಿವಮೊಗ್ಗ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಮಾ. 10 ರಂದು ಬೆ.05.00ಕ್ಕೆ ಶಿವಮೊಗ್ಗಕ್ಕೆ ಆಗಮಿಸುವರು.  ಅಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಭಾಗವಹಿಸುವರು ಹಾಗೂ ಇತರೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.  ಮಾ. 11 ರಿಂದ ಮಾ. 14ರವರೆಗೆ ನಗರದಲ್ಲಿ ವಿವಿಧ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
——————–
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ
ಶಿವಮೊಗ್ಗ, : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ- ಕಂದಾಯ ಇಲಾಖೆ ಎಂಬ ಹೊಸ ಪರಿಕಲ್ಪನೆಯಡಿ ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳು ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡಲಿದ್ದಾರೆ.
ಈ ಪರಿಕಲ್ಪನೆಯ ಅಂಗವಾಗಿ ಮಾರ್ಚ್ 20ರ  ಶನಿವಾರ ಬೆಳಗ್ಗೆ 11.00ಕ್ಕೆ ಶಿವಮೊಗ್ಗ ತಾಲೂಕು ಹೊಳಲೂರು-1 ಹೋಬಳಿ, ಆಲದಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳು  ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು, ಹಳ್ಳಿಯ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆದ್ದರಿಂದ ಆಲದಹಳ್ಳಿಯ ಗ್ರಾಮಸ್ಥರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ಮುಂಚಿತವಾಗಿ ತಮ್ಮ ಗ್ರಾಮದಲ್ಲಿಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ, ಮಾರ್ಚ್ 20 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.
————–
ಕಾಣೆಯಾಗಿದ್ದಾರೆ 
ಶಿವಮೊಗ್ಗ: ಶಿವಮೊಗ್ಗ ನಗರದ ಓಟಿ ರಸ್ತೆಯಲ್ಲಿರುವ ಹೆಬ್ಬಾರ್ ಕಾಂಡಿಮೆಂಟ್ಸ್ ಮಾಲೀಕ ಗುರುಪ್ರಸಾದ್ ಹೆಬ್ಬಾರ್ ಬಿನ್ ರಾಮಕೃಷ್ಣ ಹೆಬ್ಬಾರ್ ಎಂಬ 39 ವರ್ಷ ವಯಸ್ಸಿನ ವ್ಯಕ್ತಿಯು ಮಾರ್ಚ್-08 ರಂದು ಮನೆಯಿಂದ ಹೊರಗೆ ಹೋದವರು ಈವರೆಗೆ ಮರಳಿ ಬಂದಿರುವುದಿಲ್ಲ.
ಈ ವ್ಯಕ್ತಿಯ ಚಹರೆ; ದೃಢಕಾಯ ಮೈಕಟ್ಟು, 5.7 ಅಡಿ ಎತ್ತರ, ಗೋಧಿ ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಬಲಕಿವಿಯ ಮುಂಭಾಗ ಕೆನ್ನೆಯ ಮೇಲೆ ಹಳೆ ಗಾಯದ ಗುರುತು ಇರುತ್ತದೆ.  ಈ ವ್ಯಕ್ತಿಯು ಕಾಣೆಯಾಗುವ ದಿನದಂದು ಹಸಿರು ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಕುರಿತು  ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂ ನಂ.100 ಗಳಿಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ. (ಛಾಯಾಚಿತ್ರ ಲಗತ್ತಿಸಿದೆ)
—————–
ಕಾನೂನು ಬಾಹಿರವಾಗಿ ಖಾಸಗಿ ವಾಹನವನ್ನು ಬಾಡಿಗೆಗೆ ಓಡಿಸುವವರಿಗೆ ಕಾನೂನು ಕ್ರಮ 
ಶಿವಮೊಗ್ಗ, ಮಾರ್ಚ್-10 (ಕರ್ನಾಟಕ ವಾರ್ತೆ): ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಬಿಳಿಯ ನಂಬರ್ ಬೋರ್ಡ್ ಇರುವ ವೈಯುಕ್ತಿಕ ಒಡೆತನದ ಕಾರುಗಳು ಕಾನೂನು ಬಾಹಿರವಾಗಿ ಬಾಡಿಗೆ ಒಪ್ಪಂದ ಮೇರೆಗೆ ಜನರನ್ನು ಕರೆದೊಯ್ಯುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ವಾಹನವನ್ನು ಹಳದಿ ಬಣ್ಣದ ಬೋರ್ಡ್‍ಗೆ ಪರಿವರ್ತಿಸಿಕೊಂಡು ನಿಗಧಿತ ತೆರಿಗೆ ಪಾವತಿಸಿ, ಪರವಾನಿಗೆಯನ್ನು ಪಡೆದುಕೊಂಡು ಬಾಡಿಗೆಗೆ ಓಡಿಸುವುದು. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿರುತ್ತಾರೆ.
ಈ ಕುರಿತು ಶಿವಮೊಗ್ಗ ನಗರದಲ್ಲಿ ವ್ಯಾಪಕ ತನಿಖೆ ನಡೆಸುವಂತೆ ಮೋಟಾರು ವಾಹನ ನಿರೀಕ್ಷಕರು ಸೂಚನೆ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿರುತ್ತಾರೆ.
—————
 ಮಾ.11 ರಂದು ಮಾಂಸ ಮಾರಾಟ ನಿಷೇಧ
ಶಿವಮೊಗ್ಗ  : ಶಿವಮೊಗ್ಗ ಮಹಾನಗರಪಾಲಿಕೆಯು ಮಾರ್ಚ್ 11 ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಮಹಾನಗರಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಅಂದು ಒಂದು ದಿನ ಸ್ಥಗಿತಗೊಳಿಸುವಂತೆ ಹಾಗೂ ಆದೇಶವನ್ನು ಉಲ್ಲಂಘಿಸಿ, ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
————–
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಡತ ವಿಲೇವಾರಿಗೆಪ್ರಕಟಣೆ
ಶಿವಮೊಗ್ಗ  : ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೊಗದ ಅನ್ವಯ 2011 ರಿಂದ 2015ನೇ ಸಾಲಿನ  ಪಿರ್ಯಾದು (ದೂರು)/ಎಕ್ಸಿಕ್ಯೂಷನ್ ಅರ್ಜಿ/ ಮಿಸಲೇನಿಯಸ್ ಪಿಟಿಷನ್ ಇವುಗಳಲ್ಲಿ ವ್ಯಾಜ್ಯ ಪಕ್ಷಕಾರರು /ವಕೀಲರು ತಮ್ಮ ಕಡತಗಳೊಂದಿಗೆ ಸಲ್ಲಿಸಿರುವ ಮೂಲ ದಾಖಲೆ ಮತು ಇನ್ನಿತರ ಆದೇಶದ ಪ್ರತಿಗಳನ್ನು ಪಡೆದುಕೊಳ್ಳಲು ಪ್ರಕಟಣೆಗೊಂಡ  30 ದಿನಗಳವರೆಗೆ ಕಾಲಾವಕಾಶವಿರುತದೆ.
ವ್ಯಾಜ್ಯ ಪಕ್ಷಕಾರರು /ವಕೀಲರು ಮಾ. 23 ನಂತರ ತಮ್ಮ ಪಿರ್ಯಾದು (ದೂರು)/ಎಕ್ಸಿಕ್ಯೂಷನ್ ಅರ್ಜಿ/ ಮಿಸಲೇನಿಯಸ್ ಪಿಟಿಷನ್ ಕಡತಗಳಲ್ಲಿನ ಮೂಲ ದಾಖಲೆ ಮತು ಇನ್ನಿತರ ಆದೇಶದ ಪ್ರತಿಗಳು ಅವಶ್ಯಕತೆಯಿರುವುದಿಲ್ಲ ಎಂದು ಭಾವಿಸಿ, ಅವಧಿ ಕಳೆದ ನಂತರ ತಮ್ಮ ಕೇಸಿಗೆ ಸಂಬಂದಿಸಿದಂತೆ ಎಲ್ಲಾ ಪ್ರತಿಗಳು ದಾಖಲೆಗಳನ್ನು ನಾಶಪಡಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Related posts

ಕನಕ ಮಹಿಳಾ ಭಜನಾ ಮಂಡಳಿಯ 5 ನೇ ವರ್ಷದ ವಾರ್ಷಿಕೋತ್ಸವ: ಪುಸ್ತಕ ಬಿಡುಗಡೆ

Public Voice

ವೀರಭದ್ರಪ್ಪ ಪೂಜಾರಿ ಅವರಿಂದ ಅಧೀಕ್ಷಕರಿಗೆ ನಿಂದನೆ: ಜಿ.ಪಂ.ಆಂತರಿಕ ಮಹಿಳಾ ದೂರು ಸಮಿತಿ ಪ್ರತಿಭಟನೆ..

Public Voice

ಕಂದಾಯ ಅದಾಲತ್/ಅರ್ಜಿ ನೊಂದಣಿಗೆ ಸೂಚನೆ/ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ

Public Voice