March 26, 2021
Public Voice
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಭಾರತದಿಂದ ಪಾಕ್ ಗೆ ಕೋವಿಡ್-19 ಲಸಿಕೆ…..

ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ಸಂಚು ರೂಪಿಸುತ್ತಲೇ ಇರುತ್ತದೆ. ಆದರೂ ಕೊರೊನಾ ವೈರಸ್ ನೊಂದಿಗಿನ ಯುದ್ಧದಲ್ಲಿ ಭಾರತ ಪಾಕಿಸ್ತಾನಕ್ಕೆ ಸಹಾಯ ಮಾಡಲು ಸಿದ್ಧವಾಗಿದೆ. ಭಾರತೀಯ ಲಸಿಕೆ ಸಹಾಯದಿಂದ ಪಾಕಿಸ್ತಾನ ಕರೋನಾ ಜೊತೆ ಹೋರಾಡಲಿದೆ. ಈ ಲಸಿಕೆ ಅವರಿಗೆ ಇಂಟರ್ನ್ಯಾಷನಲ್ ಅಲೈಯನ್ಸ್ ಜಿಎವಿಐ (GAVI) ಮೂಲಕ ಲಭ್ಯವಾಗಲಿದೆ.

ಹೌದು ಭಾರತದಲ್ಲಿ ತಯಾರಾದ 45 ಮಿಲಿಯನ್ ಕೋವಿಡ್ ಲಸಿಕೆಗಳನ್ನು ಪಾಕಿಸ್ತಾನ ಪಡೆದುಕೊಳ್ಳಲಿದೆ. ಭಾರತವು ಪಾಕಿಸ್ತಾನಕ್ಕೆ ನೇರವಾಗಿ ಲಸಿಕೆಗಳನ್ನು ಪೂರೈಸುತ್ತಿಲ್ಲ. ಯುನೈಟೆಡ್ ‘ಗವಿ’ ಅಲೈಯನ್ಸ್ ಅಡಿಯಲ್ಲಿ ಈ ಲಸಿಕೆಗಳ ಪೂರೈಕೆಯಾಗಲಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳು, ನಿಯಂತ್ರಣ ಮತ್ತು ಸಮನ್ವಯಗಳ ಸಂಯುಕ್ತ ಕಾರ್ಯದರ್ಶಿ ಆಮೀರ್ ಅಶ್ರಫ್ ಖವಾಜಾ ಅವರು ಮಾಹಿತಿ ನೀಡಿದ್ದಾರೆ.

ಲಸಿಕೆ ಮೈತ್ರಿಕೂಟವಾದ ‘ಗವಿ ಅಲೈಯನ್ಸ್’, ಮಾರಕ ಹಾಗೂ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಗಳಿಂದ ಜಗತ್ತಿನ ಸುಮಾರು ಅರ್ಧದಷ್ಟು ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಲು ನೆರವು ನೀಡುತ್ತಿದೆ. ಭಾರತದ ಸೆರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಒಟ್ಟು 45 ಮಿಲಿಯನ್ ಡೋಸ್‌ಗಳು ಪಾಕಿಸ್ತಾನಕ್ಕೆ ತಲುಪಲಿವೆ. ಅದರಲ್ಲಿ 16 ಮಿಲಿಯನ್ ಡೋಸ್‌ಗಳು ಈ ಜೂನ್‌ವರೆಗೂ ಪೂರೈಕೆಯಾಗಲಿವೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನವು ಭಾರತೀಯ ನಿರ್ಮಿತ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ (Oxford-AstraZeneca) ಕರೋನಾ ಲಸಿಕೆಯ ಉಚಿತ ಪ್ರಮಾಣವನ್ನು ಪಡೆಯಲಿದ್ದು, ಇದು ದೇಶದ ಜನಸಂಖ್ಯೆಯ ಶೇಕಡಾ 20 ರಷ್ಟಿದೆ. ಭಾರತವು 65 ದೇಶಗಳಿಗೆ COVID-19 ಲಸಿಕೆ ಪೂರೈಸುತ್ತಿದೆ. ಅನೇಕ ದೇಶಗಳು ಅನುದಾನದ ಆಧಾರದ ಮೇಲೆ ಲಸಿಕೆ ಸ್ವೀಕರಿಸಿದವು.

 

Related posts

 ಡಿ.6 ರಂದು ಖಾಸಗಿ ಶಾಲೆಗಳಿಂದ ಪ್ರತಿಭಟನೆ……

Public Voice

ಜಿಲ್ಲೆಯ 18,700 ಮನೆಗಳಿಗೆ ಹಕ್ಕುಪತ್ರ: ಘೋಷಿತ ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಚಾಲನೆ- ಸಚಿವ ಕೆ.ಎಸ್.ಈಶ್ವರಪ್ಪ

Public Voice

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 9 ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ -ಸಿ.ಎಸ್. ಷಡಕ್ಷರಿ

Public Voice