March 16, 2021
Public Voice
  • Home
  • ಮುಖ್ಯಾಂಶಗಳು
  • ಗಿರೀಶ್ ಆಚಾರ್ಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ತಕ್ಷಣ ಬಂಧನಕ್ಕೆ ಎಸ್.ಆರ್. ಹಿರೇಮಠ್ ಆಗ್ರಹ..
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಗಿರೀಶ್ ಆಚಾರ್ಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ತಕ್ಷಣ ಬಂಧನಕ್ಕೆ ಎಸ್.ಆರ್. ಹಿರೇಮಠ್ ಆಗ್ರಹ..

ಶಿವಮೊಗ್ಗ,ಮಾ.13:ಅರಣ್ಯ ನಾಶ, ಅಕ್ರಮಗಣಿಗಾರಿಕೆ ಹಾಗೂ ಡಿನೋಟಿಫಿಕೇಶನ್ ವಿರುದ್ಧ ಹೋರಾಟ ನಡೆಸುತ್ತಿರುವ ಜನಸಂಗ್ರಾಮ ಪರಿಷತ್ತಿನ ಸದಸ್ಯ ಹೊಸನಗರ ತಾಲ್ಲೂಕಿನ ಪುಣಜೆ ಗ್ರಾಮದ ಗಿರೀಶ್ ಆಚಾರ್ಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಹಲ್ಲೆಗೊಳಗಾಗಿರುವ ಗಿರೀಶ್‍ಗೆ ರಕ್ಷಣೆ ನೀಡುವಂತೆ  ಜನಸಂಗ್ರಾಮ ಪರಿಷತ್‍ನ ಸ್ಥಾಪಕ ಎಸ್.ಆರ್. ಹಿರೇಮಠ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.8 ರಂದು ಕೆಲಸದ ನಿಮಿತ್ತ ಬೈಂದೂರಿಗೆ ಬೈಕ್‍ನಲ್ಲಿ ಹೋಗುತ್ತಿದ್ದ ಗಿರೀಶ್ ಆಚಾರ್ಯ ಅವರನ್ನು ನಗರ ಬಳಿ ಅಪರಿಚಿತ ದುಷ್ಕರ್ಮಿಗಳು ತಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.  ಸುಮಾರು ಒಂದು ಗಂಟೆ ಕಾಲ ಅವರಿಗೆ ಹಿಂಸೆ ನೀಡಲಾಗಿದೆ. ಈ ಸಂದರ್ಭದಲ್ಲಿ ಬಂದ ಪೆÇಲೀಸ್ ಜೀಪ್‍ನಲ್ಲಿ ಗಿರೀಶ್ ಆಚಾರ್ಯರನ್ನು ಠಾಣೆಗೆ ಕರೆದುಕೊಂಡು ಹೋಗಿ ಮಹಿಳಾ ದೌರ್ಜನ್ಯದ ಸುಳ್ಳು ಕೇಸು ದಾಖಲಿಸಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ದೂರಿದ ಅವರು, ಅಕ್ರಮ ಮರಳುಗಾರಿಕೆ, ಟಿಂಬರ್ ಮಾಫಿಯಾ, ಕಲ್ಲು ಗಣಿಗಾರಿಕೆ ಮೊದಲಾದವುಗಳ ವಿರುದ್ಧ ಗಿರೀಶ್ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಇವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ 2017 ರಲ್ಲಿ ಮಾಡಲಾಗಿರುವ ಅರಣ್ಯ ಭೂಮಿ ಡಿನೋಟಿಫಿಕೇಶನ್ ಸಂಬಂಧ ಗಿರೀಶ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದು, ಈ ಡಿನೋಟಿಫಿಕೇಷನ್ ಕೇಂದ್ರದ ಅನುಮತಿ ಇಲ್ಲದೆ ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂತಹ ಹೋರಾಟ ಮಾಡಿಕೊಂಡು ಬಂದಿರುವ ಇವರ ಮೇಲೆ ಈಗ ಹಲ್ಲೆ ಮಾಡಲಾಗಿದೆ. ಈ ಹಿಂದೆಯೂ ಮೂರು ಬಾರಿ ಹಲ್ಲೆ ನಡೆಸಲಾಗಿದೆ ಎಂದರು.
ಈ ಹಲ್ಲೆಯ ಹಿಂದೆ ಹಿಂದಿನ ಸಿಪಿಐ ಕೈವಾಡ ಇರುವುದು ಕೂಡ ಸ್ಪಷ್ಟವಾಗಿದೆ. ಸಿಸಿ ಕ್ಯಾಮರಾದ ಪೂಟೇಜ್ ತೆಗೆದು ಅದನ್ನು ಸಾಕ್ಷ್ಯವಾಗಿ ಪರಿಗಣಿಸಬೇಕು. ಹಲ್ಲೆ ನಡೆಸಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಅಗ್ರಹಿಸಿದರು.
ಗಿರೀಶ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಶಿವಕುಮಾರ್,ಎಸ್ಪಿ ಶಾಂತರಾಜು ಸ್ಪಂದಿಸಿದ್ದಾರೆ. ನಿಜವಾದ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಹೇಳಿದರು.
ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿ :ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅರಣ್ಯದಲ್ಲಿ ಭೂಮಿ ತೋರಿಸಿ ಇದುವರೆಗೂ ನಿಖರ ದಾಖಲೆಗಳನ್ನು ನೀಡಿಲ್ಲ. ಈಗ ದಾಖಲೆಗಳಿಲ್ಲದಿದ್ದರೂ ಒಂದೊಂದೇ ಕುಟುಂಬಗಳಿಗೆ ಹೆಚ್ಚಿನ ಭೂಮಿ ನೀಡಿ ಮತ್ತೊಂದು ಲೋಪವೆಸಗುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.
ಈ ಹಿಂದೆ ನೀಡಿರುವ ದಾಖಲೆಗಳ ಪ್ರಕಾರ ಭೂಮಿ ಡಿನೋಟಿಫಿಕೇಶನ್ ಮಾಡಿ ಸಂತ್ರಸ್ತರಿಗೆ ನ್ಯಾಯ ಕೊಡುವ ಕೆಲಸ ಆಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಗಣಿಗಾರಿಕೆ, ರೆಸಾರ್ಟ್ ನಿರ್ಮಾಣ, ಟಿಂಬರ್ ಮಾಫಿಯಾಕ್ಕೆ ಭೂಮಿ ನೀಡಬಾರದು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜನಸಂಗ್ರಾಮ ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ, ನಗರ್ಲೆ ವಿಜಯಕುಮಾರ್,ಟಿ.ಎಂ.ಶಿವಕುಮಾರ್, ಅಖಿಲೇಶ್ ಚಿಪ್ಪಳಿ, ಪ್ರತಿಮಾ ಕೆ.ಆರ್. ನಾಯಕ್, ಗಿರೀಶ್ ಆಚಾರ್ಯ, ಕೆ.ಟಿ.ರಮೇಶ್ ಮತ್ತಿತರರು ಇದ್ದರು.

Related posts

ಒಂದೇ ವರ್ಷದಲ್ಲಿ ಕೋವಿಡ್ ಲಸಿಕೆ ಕಂಡು ಹಿಡಿದಿದ್ದು ಹೆಮ್ಮೆಯ ವಿಚಾರ- ಆರೋಗ್ಯ ಸಚಿವ ಡಾ.ಕೆ ಸುಧಾಕರ್…

Public Voice

ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ: ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು-ಟಿ.ಎಂ.ಅಶೋಕ್

Public Voice

ರೈತರ ಹೋರಾಟ ಬೆಂಬಲಿಸಿ’ಇಂದು ರಾಜ್ಯ ಕಾಂಗ್ರೆಸ್‌ ನಿಂದ ‘ರಾಜಭವನ ಚಲೋ’’…..

Public Voice