March 16, 2021
Public Voice
  • Home
  • ಮುಖ್ಯಾಂಶಗಳು
  • ಮಹಿಳೆಯ ನಿಸ್ವಾರ್ಥ ಸೇವೆಯನ್ನು ಹಣದಲ್ಲಿ ಅಳಿಯಲು ಸಾಧ್ಯವಿಲ್ಲ-ಡಾ.ತೇಜಸ್ವಿನಿ ಅನಂತ್‍ಕುಮಾರ್
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಮಹಿಳೆಯ ನಿಸ್ವಾರ್ಥ ಸೇವೆಯನ್ನು ಹಣದಲ್ಲಿ ಅಳಿಯಲು ಸಾಧ್ಯವಿಲ್ಲ-ಡಾ.ತೇಜಸ್ವಿನಿ ಅನಂತ್‍ಕುಮಾರ್

ಶಿವಮೊಗ್ಗ,ಮಾ.13:ಮಹಿಳೆಯ ನಿಸ್ವಾರ್ಥ ಸೇವೆಯನ್ನು ಹಣದಲ್ಲಿ ಅಳಿಯಲು ಸಾಧ್ಯವಿಲ್ಲ, ಅಪೇಕ್ಷೆ ಇಲ್ಲದ ಕೆಲಸಕ್ಕೆ ಬೆಲೆ ಕಟ್ಟಲೂ ಆಗುವುದಿಲ್ಲ ಎಂದು ಅಧಮ್ಯ ಚೇತನದ ಸಂಸ್ಥಾಪಕಿ ಡಾ.ತೇಜಸ್ವಿನಿ ಅನಂತ್‍ಕುಮಾರ್ ಹೇಳಿದರು.
ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಶ್ರೀ ಮಾರಿಕಾಂಬ ಮೈಕ್ರೊ ಫೈನಾನ್ಸ್ ಪ್ರೈವೇಟ್ ಲಿ. ಇವರ ಆಶ್ರಯದಲ್ಲಿ ನಡೆದ ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆ ತನ್ನನ್ನು ತಾನು “ಹೌಸ್ ವೈಫ್” ಎಂದು ಕರೆದುಕೊಳ್ಳಬಾರದು. ದಯವಿಟ್ಟು ಈ ಪದವನ್ನು ಇಂದಿನಿಂದಲೆ ತೆಗೆದುಬಿಡಿ ಮಹಿಳೆ ಮನೆಕೆಲಸಕ್ಕಾಗಿ ಸೀಮಿತವಾಗಿರುವುದಿಲ್ಲ ಮತ್ತು ಮಹಿಳೆ ಮನೆಯಲ್ಲಿ ಮಾಡುವ ಕೆಲಸಕ್ಕೆ ಲೆಕ್ಕ ಹಾಕಲು ಸಾಧ್ಯವಾಗುವುದೂ ಇಲ್ಲ. ಹಾಗೇನಾದರು ಆಗಿದ್ದರೆ ಈ ದೇಶದ ಜಿಡಿಪಿ ಇಂದು ಅತಿ ಎತ್ತರಕ್ಕೆ ಹೋಗಬೇಕಾಗಿತ್ತು. ಒಬ್ಬ ಮಹಿಳೆ ತನ್ನ ಮನೆಯಲ್ಲಿ ಮಾಡುವ ಕೆಲಸಕ್ಕೆ ಇಂತಿಷ್ಟು ಸಂಬಳ ಎಂದು ಲೆಕ್ಕ ಹಾಕಲು ಸಾಧ್ಯವೆ ಎಂದು ಪ್ರಶ್ನೆ ಮಾಡಿದರು.
ಮಹಿಳೆ ಸಹನೆಶೀಲೆ ನಾಯಕತ್ವ ಗುಣವನ್ನ ಬೆಳೆಸಿಕೊಂಡವಳು ಆದರೆ ಮಹಿಳೆಗಿರುವ ಬಹುದೊಡ್ಡ ಪ್ರಶ್ನೆ ಎಂದರೆ ತಾವು ಎನು ಮಾಡಬೇಕು. ಬಿಡುವಿನ ವೇಳೆಯಲ್ಲೂ ಹೇಗೆ ಕಳೆಯಬೇಕು. ಎಂಬುದು ಹಾಗಾಗಿ ಮಹಿಳೆ ಬೇಕಾದಷ್ಟು ದಾರಿಗಳನ್ನು ಕಂಡುಕೊಳ್ಳಬಹುದು. ಪ್ರಮುಖವಾಗಿ ನಿರ್ಣಯ ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗೆಯೆ ತನ್ನ ಮನೆಯನ್ನೇ ತಾನು ಸಂಬಾಳಿಸಿಕೊಂಡು ಹೋಗಬೇಕಾಗಿದೆ. ಪ್ರಮುಖವಾಗಿ ಮನೆಯ ಕಸ,ನೀರಿನ ಮಿತವ್ಯಯ, ಹಸಿರು ಬೆಳೆಸುವುದು ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸುವುದನ್ನು ಕಲಿಯಬೇಕಾಗಿದೆ ಎಂದರು.
ಮೈಕ್ರೊ ಫೈನಾನ್ಸ್ ಬಗ್ಗೆ ಅತ್ಯಂತ ಹೆಮ್ಮೆ ವ್ಯಕ್ತಪಡಿಸಿದ ತೇಜಸ್ವಿನಿ ಈಶ್ವರಪ್ಪನವರ ಅವರ ಮಗ ಕಾಂತೇಶ್ ಅವರು ಈ ಸಂಸ್ಥೆಯನ್ನು ಬಹುದೊಡ್ಡದಾಗಿ ಕಟ್ಟಿದ್ದಾರೆ. ಇದೊಂದು ಆಶ್ವರ್ಯವೇ ಸರಿ. ಇದರ ಜೊತೆಗೆ ರಾಜಕೀಯವಾಗಿಯೂ ಮುಂದೆ ಬರುತ್ತಿದ್ದಾರೆ. ತಮ್ಮ ಪತಿ ಅನಂತ್‍ಕುಮಾರ್, ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈಶ್ವರಪ್ಪನವರು ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದವರು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಮಾರಿಕಾಂಬ ಮೈಕ್ರೊ ಫೈನಾನ್ಸಿನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಇ.ಕಾಂತೇಶ್ 2015 ರಲ್ಲಿ ನಮ್ಮ ಸಂಸ್ಥೆ ಆರಂಭವಾಯಿತು. ಆಗ ಕೇವಲ 60 ಸಂಘಗಳಿಗೆ ಸಾಲ ಕೊಟ್ಟಿದ್ದೆವು. ಆದರೆ ಈಗ 1400 ಸಂಘಗಳಿಗೆ 49 ಕೋಟಿ ರೂ. ಸಾಲ ನೀಡಿದ್ದೇವೆ. ಸಾಲ ವಾಪಸ್ಸಾತಿ ಕೂಡ ಅಷ್ಟೆ ಚೆನ್ನಾಗಿದೆ. ಮಹಿಳೆಯರ ಜೀವನ ಉತ್ತಮವಾಗಲಿ ಎಂಬ ಕಲ್ಪನೆಯನ್ನು ಹೊತ್ತುಕೊಂಡು ಈ ಸಂಸ್ಥೆಯನ್ನು ಆರಂಭಿಸಿದೆವು. ಮುಂದಿನ ಜೂನ್ 10 ರಂದು ಅಪ್ಪಾಜಿ ಕೆ.ಎಸ್.ಈಶ್ವರಪ್ಪನವರ ಜನ್ಮದಿನ ಇದೆ. ಈ ಹಿನ್ನಲೆಯಲ್ಲಿ ಜೂ.9 ಮತ್ತು 10 ರಂದು ಎಲ್ಲಾ ಸಂಘಗಳ ಸದಸ್ಯರನ್ನು ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸ ಕೈಗೊಳ್ಳಲಾಗುವುದು. ಸುಮಾರು 3500 ಸಾವಿರ ಸದಸ್ಯರು ಈ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಮಾತನಾಡಿ, ಕರಕುಶಲ ಅಭಿವೃದ್ಧಿ ನಿಗಮ ಮಹಿಳೆಯರ ಸ್ವಾವಲಂಬನೆಯ ಪ್ರತೀಕವಾಗಿದೆ. ಅವರು ತಯಾರಿಸಿದ ವಸ್ತುಗಳನ್ನು ಅಭಿವೃದ್ದಿ ನಿಗಮದಿಂದ ಖರೀದಿಸಲಾಗುವುದು. ಇದಕ್ಕಾಗಿ ಶಿವಮೊಗ್ಗದಲ್ಲಿ ನಿಗಮದ ವತಿಯಿಂದ ಹೊಸ ಷೋ ರೂಂ ತೆರೆಯಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನೂತನ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ ಅವರನ್ನು ಸನ್ಮಾನಿಸಲಾಯಿತು.  ಸಹ ಚೇತನ ನಾಟ್ಯಾಲಯದ ಕಲಾವಿದರು ನೃತ್ಯ ಪ್ರದರ್ಶನ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಕೆ.ಎಸ್.ಈಶ್ವರಪ್ಪ ವಹಿಸಿದ್ದರು. ಪ್ರಮುಖರಾದ ಜ್ಞಾನೇಶ್ವರ್, ಸುವರ್ಣಶಂಕರ್, ಸುರೇಖಾ ಮುರುಳಿಧರ್, ಸೀತಾಲಕ್ಷ್ಮೀ, ಮಹೇಶ್ ಮುಂತಾದವರಿದ್ದರು.

Related posts

ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ- ಸಿಎಂ ಬಿಎಸ್ ವೈ ಘೋಷಣೆ….

Public Voice

ಹಾಲಿನಲ್ಲಿ ಜೀವನಿರೋಧಕಗಳು ಹಾಗೂ ಶಿಲೀಂಧ್ರ ವಿಷಗಳನ್ನು ಕಡಿಮೆ ಮಾಡುವಲ್ಲಿ ಪಶುವೈದ್ಯರ ಪಾತ್ರ ಮಹತ್ವದ್ದು-ಡಾ: ಬಸವರಾಜ್ ಕೆ ಎಸ್‍

Public Voice

ಮನೆಯಲ್ಲೇ ಕೋವಿಡ್ ಲಸಿಕೆ ಪಡೆದ ಸಚಿವ ಬಿ.ಸಿ ಪಾಟೀಲ್ ನಡೆಗೆ ಆಕ್ಷೇಪ …

Public Voice