March 15, 2021
Public Voice
  • Home
  • ಮುಖ್ಯಾಂಶಗಳು
  • ಬಿಇಡಿ ಸೀಟುಗಳನ್ನು ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ…
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಬಿಇಡಿ ಸೀಟುಗಳನ್ನು ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ…

ಶಿವಮೊಗ್ಗ, ಮಾ.13: ಬಿಇಡಿ ಸೀಟುಗಳನ್ನು ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ದ ತನಿಖೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಶಿವಮೊಗ್ಗ ಘಟಕ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಬೇಕಾಗಿದ್ದ ಕರ್ನಾಟಕ ರಾಜ್ಯದಲ್ಲಿ ಬಿಇಡಿ ಸೀಟುಗಳನ್ನು ಆಕ್ರಮವಾಗಿ ಮಾರಾಟ ಮಾಡುತ್ತಿರುವ ದಂದೆ ವ್ಯಾಪಕವಾಗಿ ನಡೆಯುತ್ತಿದ್ದು, ಬಿಇಡಿ ಕೋರ್ಸ್‍ಗೆ ಬೇಡಿಕೆಯಿರುವುದನ್ನು ಅರಿತ ಕೆಲವು ಬಿಇಡಿ ಶಿಕ್ಷಣ ಸಂಸ್ಥೆಗಳು ಒಂದು ರೀತಿಯಲ್ಲಿ ಬಿಇಡಿ ಪ್ರಮಾಣ ಪತ್ರವನ್ನು ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದೆ ಎಂದು ಎಬಿವಿಪಿ ಆರೋಪಿಸಿದೆ.
ತರಗತಿಗಳಿಗೆ  ಹಾಜರಾಗದೇ ಬಿಇಡಿ ಕೋರ್ಸ್ ಮಾಡಲು ಬಯಸುವ ಕೆಲ ಅಭ್ಯರ್ಥಿಗಳಿಗೆ ಹಾಜರಾತಿ ನೀಡಿ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದಾರೆ. ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದು ಬಂದ ವಿದ್ಯಾರ್ಥಿಗಳಿಂದಲೂ  ಖಾಸಗೀ ಬಿಇಡಿ ಕಾಲೇಜುಗಳು ಬೇಕಾಬಿಟ್ಟಿ ದುಡ್ಡು ವಸೂಲು ಮಾಡುತ್ತಿರುವುದು  ಖಂಡನಾರ್ಹವಾಗಿದೆ. ಒಂದು ದಿನವೂ ತರಗತಿಗೆ ಹಾಜರಾಗಿ ಪಾಠ ಕೇಳದೆ ಕೇವಲ ಪರೀಕ್ಷೆಯನ್ನಷ್ಟೇ ಬರೆದು, ಬಿಇಡಿ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳುವವರು ಶಿಕ್ಷಣದ ಗುಣಮಟ್ಟ ಕಾಪಾಡಲು ಸಾಧ್ಯವೇ?
ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವ ಇಂತಹ ಅಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಮೇಲೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು. ಅಕ್ರಮ ದಂದೆಯಲ್ಲಿ ತೊಡಗಿಸಿಕೊಂಡಿರುವ ಬಿಇಡಿ ಕಾಲೇಜುಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಎಬಿವಿಪಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಬಿವಿಪಿ ಮಹಾನಗರ ಕಾರ್ಯದರ್ಶಿ ಧನುಷ್ ಗೌಡ ಮತ್ತಿತರರು ಇದ್ದರು.

Related posts

ಸ್ವಾತಂತ್ರ್ಯದ ಕಿಚ್ಚು ಯುವಜನರಲ್ಲಿ ಹಬ್ಬಿಸಲು ಭೂಪಾಳಂ ಯಶಸ್ವಿ: ಸಾಹಿತ್ಯ ಚಟುವಟಿಕೆಯಿಲ್ಲದ ಶಿವಮೊಗ್ಗ ಮಾಂಗಲ್ಯವಿಲ್ಲದ ಸುಂದರಿಯಂತೆ

Public Voice

ಈ ವಾರದ ಜಿಲ್ಲೆಯ ಸಾಧಕರ ಸ್ಮರಣೆ ಕೃತಜ್ಞತೆ ಸಮರ್ಪಣೆ: ಬಹುಮುಖಿ ಕ್ಷೇತ್ರದಲ್ಲಿ ಭೂಪಾಳಂ ಚಂದ್ರಶೇಖರಯ್ಯ ಸಾಧನೆ ನೆನಪು

Public Voice

ಟ್ವಿಟ್ಟರ್ ನಲ್ಲಿ ಉದ್ಧವ್ ಠಾಕ್ರೆ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ….

Public Voice