March 15, 2021
Public Voice
  • Home
  • ಮುಖ್ಯಾಂಶಗಳು
  • ʼತ್ರಿವರ್ಣ ಧ್ವಜʼ ವಿನ್ಯಾಸಕಾರ ‘ಪಿಂಗಲಿ ವೆಂಕಯ್ಯ’ರಿಗೆ ಭಾರತ ರತ್ನ ನೀಡಿ…
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ʼತ್ರಿವರ್ಣ ಧ್ವಜʼ ವಿನ್ಯಾಸಕಾರ ‘ಪಿಂಗಲಿ ವೆಂಕಯ್ಯ’ರಿಗೆ ಭಾರತ ರತ್ನ ನೀಡಿ…

 

ನವದೆಹಲಿ: ದೇಶದ ರಾಷ್ಟ್ರಧ್ವಜವನ್ನ ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯ ಅವರಿಗೆ  ಮರಣೋತ್ತರ ಭಾರತ ರತ್ನ ಪ್ರಶಸ್ತಿ  ನೀಡುವಂತೆ ಆಗ್ರಹ ಕೇಳಿ ಬಂದಿದೆ.

ಹೌದು ಹೀಗೆ ಒತ್ತಾಯಿಸಿರುವುದು ಆಂಧ್ರ ಪ್ರದೇಶ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ.  ಈ ಕುರಿತು ವೈ.ಎಸ್. ಜಗನ್ಮೋಹನ್ ರೆಡ್ಡಿ  ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ 75 ವಾರಗಳ ನಡೆಯುವ ಆಜಾದಿ ಕಾ ಮಹೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿದ ಜಗನ್ ಮೋಹನ್ ರೆಡ್ಡಿ ದಿ. ವೆಂಕಯ್ಯರ ಪುತ್ರಿ ಘಂಟಸಾಲಾ ಸೀತಾಮಹಾಲಕ್ಷ್ಮೀಯವರನ್ನ ಸನ್ಮಾನಿಸಿದರು. ಸಿಎಂ ಜಗನ್ಮೋಹನ್ ರೆಡ್ಡಿ ಸೀತಾಲಕ್ಷ್ಮೀಯವರಿಗೆ 75 ಲಕ್ಷ ರೂಪಾಯಿಗಳನ್ನ ಗೌರವ ಧನ ರೂಪದಲ್ಲಿ ನೀಡಿದರು. ಹಾಗೂ ತ್ರಿವರ್ಣ ಧ್ವಜವನ್ನ ವಿನ್ಯಾಸಗೊಳಿಸಿದ ದಿವಂಗತ ವೆಂಕಯ್ಯರಿಗೆ ಮರಣೋತ್ತರ ಭಾರತ ರತ್ನ ನೀಡಿ ಎಂದು ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೃಷ್ಣ ಜಿಲ್ಲೆಯ ನಿವಾಸಿಯಾಗಿದ್ದ ಪಿಂಕಲಿ ವೆಂಕಯ್ಯ, ಮಹಾತ್ಮಾ ಗಾಂಧಿ 1921ರ ಏಪ್ರಿಲ್ 1ರಂದು ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ತ್ರಿವರ್ಣ ಧ್ವಜವನ್ನ ನೀಡಿದ್ದರು. 1947ರ ಜುಲೈ 22ರಂದು ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದ ತ್ರಿವರ್ಣ ಧ್ವಜವನ್ನ ರಾಷ್ಟ್ರೀಯ ಧ್ವಜವನ್ನಾಗಿ ಸ್ವೀಕರಿಸಲಾಯಿತು.

Related posts

ದೇವಾಂಗ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಮಾ.10ರಂದು ಬೃಹತ್ ಉರುಳು ಸೇವೆ

Public Voice

“ಜ. 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ” : ಸಿಎಂ ಬಿ.ಎಸ್.ವೈ

Public Voice

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಗಲಿರುಳು ಧರಣಿ ನಡೆಸುತ್ತಿದ್ದರೂ ಸ್ಪಂದಿಸದ ಜನಪ್ರತಿನಿಧಿಗಳು: ಮಾನವ ಹಕ್ಕುಗಳ ಹೋರಾಟ ಸಮಿತಿ ಖಂಡನೆ

Public Voice