March 15, 2021
Public Voice
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ನಾವೆಲ್ಲಾ ಶ್ರೀರಾಮನ ಮಕ್ಕಳು- ಡಿ.ಕೆ ಶಿವಕುಮಾರ್…

ಶಿವಮೊಗ್ಗ : ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ. ಶ್ರೀರಾಮ ನಮ್ಮವನು, ನಾವೆಲ್ಲಾ ಅವರ ಮಕ್ಕಳು.  ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಶಿವಮೊಗ್ಗ ಚಲೋ ನಲ್ಲಿ ಭಾಗವಹಿಸಿ ಮಾತನಾಡಿದಂತ ಡಿಕೆ ಶಿವಕುಮಾರ್, ಬಿಜೆಪಿ ಸರ್ಕಾರ ನಮ್ಮ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಿನಾ ಕಾರಣ ಕೇಸ್ ಹಾಕುವ ಮೂಲಕ, ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟವಾಗಿದೆ ಎಂದರು.

ನಾವು ಶ್ರೀರಾಮನ ಮಕ್ಕಳೇ. ಅದೇ ಸಂಸ್ಕೃತಿಯಲ್ಲಿ ಬೆಳೆದು ಬಂದವರು. ನಾನು ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ರಮೇಶ್ ಕುಮಾರ್ ಎಂದು ಎಲ್ಲರೂ ಹೆಸರಿಟ್ಟುಕೊಂಡಿದ್ದೇವೆ. ನಮ್ಮದೂ ಹಿಂದುತ್ವವೇ, ಜೊತೆಗೆ ಮಾನವತ್ವವೂ ನಮ್ಮಲ್ಲಿದೆ ಎಂದು ಹೇಳಿದರು.

ನಮ್ಮ ಕಾರ್ಯಕರ್ತರಿಗೆ ಯಾರೇ ಕಿರುಕುಳ ನೀಡಿದ್ರು, ಅಲ್ಲಿಂದಲೇ ನಮ್ಮ ಹೋರಾಟ ನಡೆಸುತ್ತೇವೆ. ರಾಜ್ಯಾಧ್ಯಂತ ಬಿಜೆಪಿ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ. ಇಂತಹ ಹೋರಾಟವನ್ನು ಶಿವಮೊಗ್ಗದಿಂದ ಪ್ರಾರಂಭಿಸಿದ್ದೇವೆ. ಒಂದು ಸುಳ್ಳನ್ನು ನೂರು ಬಾರಿ ಹೇಳಬೇಕು ಎನ್ನುವಂತ ಈಶ್ವರಪ್ಪ ಅವರಿಂದ ನಾವೇನೂ ಕಲಿಯಬೇಕಿಲ್ಲ ಎಂಬುದಾಗಿ ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ. ಶ್ರೀರಾಮ ನಮ್ಮವರು, ನಾವೆಲ್ಲಾ ಅವರ ಮಕ್ಕಳು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್ ಐ ಟಿ ತನಿಖೆ ಸರಿಯಾಗಿ ನಡೆಯಬೇಕಿದೆ. ಮೊದಲು ಸಿಡಿ ನಕಲಿಯೋ ಅಸಲಿಯೋ ಎಂದು ತಿಳಿಯಬೇಕಿದೆ. ಇದು ಸರಿಯಾದ ತನಿಖೆಯಿಂದ ಹೊರಬರಬೇಕಿದೆ ಎಂದರು.

Related posts

ಬಿಜೆಪಿ ಜತೆ ಇದ್ದಿದ್ರೆ ಈಗಲೂ ರಾಜ್ಯದಲ್ಲಿ ನಾನೇ ಸಿಎಂ ಆಗಿರ್ತಿದ್ದೆ…

Public Voice

ಉದ್ಧವ್ ಠಾಕ್ರೆ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯಿರಿ- ‘ಕೈ’ ನಾಯಕರಿಗೆ ಡಿಸಿಎಂ ಸವಾಲು…

Public Voice

ಫೆ. 23 ರಂದು ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ

Public Voice